ನವದೆಹಲಿ: ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ಬಂದ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ಅವರ ಹೇಳಿಕೆಗಳು ಇಲ್ಲಿವೆ.
ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿರುವುದು ನನಗೆ ಖುಷಿ ನೀಡಿದೆ. ರಾಷ್ಟ್ರದ ಅಭಿವೃದ್ಧಿಗೆ ಅವರು ಅಗಣಿತ ಕೊಡುಗೆ ನೀಡಿದ್ದಾರೆ. ನನ್ನ, ಅವರ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿದ್ದವು. ಆದರೆ, ಅವರೊಬ್ಬ ಉತ್ತಮ ಸಂಸದೀಯ ಪಟುವಾಗಿದ್ದರು.
ಶರದ್ ಪವಾರ್,
ಅಧ್ಯಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)
***
ರಾಷ್ಟ್ರ ನಿರ್ಮಾಣದಲ್ಲಿ ಅಡ್ವಾಣಿ ಅವರ ಕೊಡುಗೆ ಮರೆಯಲಾಗದ್ದು ಹಾಗೂ ಉತ್ತೇಜನಕಾರಿಯಾದುದು. ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಅಡ್ವಾಣಿಯವರ ಜೊತೆಗೂಡಿ ಕೆಲಸ ಮಾಡಿದ್ದೇನೆ. ದೇಶದ ಗೌರವಾನ್ವಿತ ಮುತ್ಸದ್ಧಿಗಳಲ್ಲಿ ಅವರೂ ಒಬ್ಬರು.
ನಿತೀಶ್ ಕುಮಾರ್,
ಮುಖ್ಯಮಂತ್ರಿ, ಬಿಹಾರ
***
ಉಪ ಪ್ರಧಾನಿ ಸೇರಿದಂತೆ ವಿವಿಧ ಸಾಂವಿಧಾನಿಕ ಹೊಣೆಗಾರಿಕೆ ನಿಭಾಯಿಸಿರುವ ಎಲ್.ಕೆ.ಅಡ್ವಾಣಿ ಅವರು ದೇಶದ ಭದ್ರತೆ, ಏಕತೆ, ಸೌಹಾರ್ದತೆಗೆ ಸಾಟಿಯಿಲ್ಲದ ಸೇವೆ ಸಲ್ಲಿಸಿದ್ದಾರೆ. ಈ ಪ್ರಶಸ್ತಿ ಅವರಿಗಷ್ಟೇ ಅಲ್ಲ, ದೇಶದ ಕೋಟ್ಯಂತರ ಜನರಿಗೆ ಸಂದ ಗೌರವವಾಗಿದೆ.
ಅಮಿತ್ ಶಾ,
ಕೇಂದ್ರ ಗೃಹ ಸಚಿವ
***
ದೇಶದ ಗೃಹ ಸಚಿವರಾಗಿ ಸೇವೆ ಸಲ್ಲಿಸಿದ್ದ ಅಡ್ವಾಣಿ ಅವರು ‘ಉಕ್ಕಿನ ಮನುಷ್ಯ’. ಆರು ದಶಕವನ್ನು ಮೀರಿದ ಅವರ ಸಾರ್ವಜನಿಕ ಬದುಕು ಕಳಂಕರಹಿತವಾಗಿತ್ತು.
ದೇವೇಂದ್ರ ಫಡಣವೀಸ್
ಉಪ ಮುಖ್ಯಮಂತ್ರಿ, ಮಹಾರಾಷ್ಟ್ರ
***
ಹಲವು ವರ್ಷ ಕಾಲ, ಹಲವಾರು ರೀತಿಯಲ್ಲಿ ಅಡ್ವಾಣಿಯವರು ಭಾರತದ ವಿಕಸನಕ್ಕೆ ತನ್ನದೇ ಕೊಡುಗೆ ನೀಡಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕ ಬದುಕಿನಲ್ಲಿನ ಅವರ ನಾಯಕತ್ವವು ಅನುಕರಣೀಯ.
ಎಸ್.ಜೈಶಂಕರ್,
ವಿದೇಶಾಂಗ ವ್ಯವಹಾರಗಳ ಸಚಿವ
***
ಕೇಂದ್ರದಲ್ಲಿ ತನ್ನ ಅವಧಿ ಅಂತ್ಯವಾಗುವ ಮೊದಲು ಬಿಜೆಪಿ ಈ ಪ್ರಶಸ್ತಿಗೆ ಅಡ್ವಾಣಿಯವರನ್ನು ಆಯ್ಕೆ ಮಾಡಿದೆ. ತನ್ನ ಮತಬ್ಯಾಂಕ್ ಛಿದ್ರಗೊಳ್ಳಬಾರದು ಎಂಬುದೇ ಇದರ ಹಿಂದಿನ ಉದ್ದೇಶ. ಇದನ್ನು ಅವರ ಮೇಲಿನ ಗೌರವದಿಂದ ನೀಡಿದ್ದಲ್ಲ. ಭಾರತ ರತ್ನ ಪ್ರಶಸ್ತಿಗೆ ತನ್ನದೇ ಗೌರವವಿದೆ. ಆದರೆ, ಅದನ್ನು ಪಕ್ಷದ ಮತಗಳನ್ನು ಭದ್ರಪಡಿಸಿಕೊಳ್ಳಲೆಂದೇ ಈಗ ನೀಡಲಾಗಿದೆ.
ಅಖಿಲೇಶ್ ಯಾದವ್,
ಸಮಾಜವಾದಿ ಪಕ್ಷದ ಮುಖ್ಯಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.