ADVERTISEMENT

ಭಾರ್ತಿ ಏರ್‌ಟೆಲ್‌ನ ರಿಚಾರ್ಜ್‌ ದರ ಹೆಚ್ಚಳ: ಜುಲೈ 3ರಿಂದ ಪರಿಷ್ಕೃತ ದರ ಜಾರಿ

ಪಿಟಿಐ
Published 28 ಜೂನ್ 2024, 5:52 IST
Last Updated 28 ಜೂನ್ 2024, 5:52 IST
   

ನವದೆಹಲಿ: ಮುಕೇಶ್ ಅಂಬಾನಿ ಮಾಲಿಕತ್ವದ ರಿಲಾಯನ್ಸ್ ಜಿಯೋ ವಿವಿಧ ಪ್ಲಾನ್​ಗಳಿಗೆ ನಿನ್ನೆ(ಗುರುವಾರ) ದರ ಹೆಚ್ಚಿಸಿದ ಬೆನ್ನಲ್ಲೇ ಇಂದು (ಶುಕ್ರವಾರ) ಭಾರ್ತಿ ಏರ್‌ಟೆಲ್ ಕೂಡ ರಿಚಾರ್ಜ್‌ ದರ ಹೆಚ್ಚಿಸಿದೆ.

ರಿಲಾಯನ್ಸ್ ಜಿಯೋದ ದರ ಶೇ 12ರಿಂದ 27ರವರೆಗೂ ಏರಿಕೆಯಾದರೆ, ಭಾರ್ತಿ ಏರ್‌ಟೆಲ್ ಶೇ 10-21ರಷ್ಟು ಹೆಚ್ಚಿಸಿದೆ. ಪರಿಷ್ಕೃತ ದರಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಏರ್‌ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 3ರಿಂದ ಜಾರಿಗೆ ಬರುವಂತೆ ಏರ್‌ಟೆಲ್‌ನ ಪರಿಷ್ಕೃತ ಪ್ರೀಪೇಯ್ಡ್ ಪ್ಲಾನ್​ಗಳು ಹೀಗಿವೆ..

ಅನ್​ಲಿಮಿಟೆಡ್ ವಾಯ್ಸ್ ಪ್ಲಾನ್:

ADVERTISEMENT
  • ₹179ರಿಂದ ₹199ಕ್ಕೆ ಹೆಚ್ಚಳ (28 ದಿನ ವ್ಯಾಲಿಡಿಟಿ)

  • ₹455ರಿಂದ ₹509ಕ್ಕೆ ಹೆಚ್ಚಳ (84 ದಿನ ವ್ಯಾಲಿಡಿಟಿ)

  • ₹1,799ರಿಂದ ₹1,999ಕ್ಕೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಡಾಟಾ ಪ್ಲಾನ್​ಗಳು

  • 1 ಜಿಬಿ–₹265ರ ನಿಂದ ₹ 299ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

  • 1.5 ಜಿಬಿ–₹299 ನಿಂದ ₹349ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

  • 2.5 ಜಿಬಿ–₹359 ನಿಂದ ₹409ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

  • 3 ಜಿಬಿ–₹399 ನಿಂದ ₹449ಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)

  • 1.5ಜಿಬಿ–₹479 ನಿಂದ ₹579ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)

  • 2 ಜಿಬಿ–₹549 ನಿಂದ ₹649ಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)

  • 1.5ಜಿಬಿ–₹719 ನಿಂದ ₹859ಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)

  • 2 ಜಿಬಿ–₹839 ನಿಂದ ₹979ಗೆ ಬೆಲೆ ಹೆಚ್ಚಳ (84 ದಿನ ವ್ಯಾಲಿಡಿಟಿ)

  • 2 ಜಿಬಿ–₹2,999 ನಿಂದ ₹3,599ಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಹೆಚ್ಚುವರಿ ಡಾಟಾ ದರ

  • 1 ಜಿಬಿ ಹೆಚ್ಚುವರಿ ಡಾಟಾ ದರ ₹19 ನಿಂದ ₹22ಗೆ ಹೆಚ್ಚಳ (1 ದಿನದ ವ್ಯಾಲಿಡಿಟಿ)

  • 2 ಜಿಬಿ ಹೆಚ್ಚುವರಿ ಡಾಟಾ ದರ ₹29 ನಿಂದ ₹33ಗೆ ಹೆಚ್ಚಳ (1 ದಿನದ ವ್ಯಾಲಿಡಿಟಿ)

  • 4 ಜಿಬಿ ಹೆಚ್ಚುವರಿ ಡಾಟಾಗೆ ₹65 ನಿಂದ ₹77ಗೆ ಹೆಚ್ಚಳ (ಪ್ಲಾನ್ ಕಾಲಮಿತಿಯವರೆಗೂ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.