ADVERTISEMENT

ಭವಾನಿಪುರ ಉಪಚುನಾವಣೆ: ಮಮತಾ ಬ್ಯಾನರ್ಜಿಗೆ 58 ಸಾವಿರ ಮತಗಳ ಅಂತರದ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2021, 9:51 IST
Last Updated 3 ಅಕ್ಟೋಬರ್ 2021, 9:51 IST
ಟಿಎಂಸಿ ಬೆಂಬಲಿಗರ ಸಂಭ್ರಮ (ಪಿಟಿಐ ಚಿತ್ರ)
ಟಿಎಂಸಿ ಬೆಂಬಲಿಗರ ಸಂಭ್ರಮ (ಪಿಟಿಐ ಚಿತ್ರ)   

ಕೋಲ್ಕತ: ಪಶ್ಚಿಮ ಬಂಗಾಳಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವನಿಪುರ ಉಪಚನಾವಣೆಯಲ್ಲಿ ಜಯಗಳಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರಿಯಾಂಕಾ ಟಿಬ್ರೇವಾಲ್‌ ವಿರುದ್ಧ ಸುಮಾರು 58,832 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಎದುರಾಗಿದ್ದ ತೊಡಕನ್ನು ಜಯದ ಘೋಷದೊಂದಿಗೆ ದಾಟಿದ್ದಾರೆ.

ಚುನಾವಣೆಯ ಫಲಿತಾಂಶಕ್ಕೆ ಭಾವಾನಿಪುರ ಕ್ಷೇತ್ರದ ಮತದಾರರು ಮತ್ತು ಪಶ್ಚಿಮ ಬಂಗಾಳದ ಜನರಿಗೆ ಧನ್ಯವಾದವಾಗಳನ್ನು ತಿಳಿಸಬೇಕು ಎಂದು ಸಿಎಂ ಮಮತಾ ಬ್ಯಾನರ್ಜಿ ಗೆಲುವಿನ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಸಾನ್ಸೆರ್‌ಗಂಜ್‌ ಮತ್ತು ಜಂಗಿಪುರ ಕ್ಷೇತ್ರಗಳಲ್ಲೂ ಟಿಎಂಸಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

ADVERTISEMENT

ಈ ವರ್ಷ ನಡೆದಪಶ್ಚಿಮಬಂಗಾಳವಿಧಾನಸಭೆಕ್ಷೇತ್ರಗಳ ಚುನಾವಣೆಯಲ್ಲಿತೃಣಮೂಲ ಕಾಂಗ್ರೆಸ್‌ ಪಕ್ಷವು ಬಹುಮತ ಪಡೆದು ಸರ್ಕಾರ ರಚಿಸಿತ್ತು. ಆದರೆಮಮತಾ ಬ್ಯಾನರ್ಜಿ ನಂದಿಗ್ರಾಮ ಕ್ಷೇತ್ರದಲ್ಲಿ ಸೋಲು ಕಂಡಿದ್ದರಿಂದ ಮುಖ್ಯಮಂತ್ರಿಯಾಗಿ ಮುಂದುವರಿಯಲು ಉಪಚುನಾವಣೆಯೊಂದರಲ್ಲಿ ಗೆಲುವು ಸಾಧಿಸುವ ಅನಿವಾರ್ಯತೆ ಎದುರಾಗಿತ್ತು. ಭವಾನಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಸಿಪಿಐಎಂನ ಶ್ರೀಜಿಬ್‌ ಬಿಸ್ವಾಸ್‌ ಕಣದಲ್ಲಿದ್ದರು.ಸೆಪ್ಟೆಂಬರ್ 30 ರಂದು ನಡೆದ ಚುನಾವಣೆಯಲ್ಲಿ ಶೇ. 53.32 ರಷ್ಟು ಮತದಾನವಾಗಿತ್ತು ಎಂದು ಚುನಾವಣೆ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.