ಡೆಹ್ರಾಡೂನ್‌ನಲ್ಲಿ ಸೋಮವಾರ ನಡೆದಚುನಾವಣಾ ಪ್ರಚಾರ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಬಘೇಲ್, ಮುಂಬರುವ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ತಮ್ಮ (ಕಾಂಗ್ರೆಸ್) ಪಕ್ಷವು ಅಧಿಕಾರಕ್ಕೇರಿದರೆ ಸಿಲಿಂಡರ್ ದರ₹ 500ಕ್ಕಿಂತ ಹೆಚ್ಚಾಗುವುದಿಲ್ಲ ಎಂದುಆಶ್ವಾಸನೆ ನೀಡಿದ್ದರು.
ಈ ಬಗ್ಗೆ ಮಾತನಾಡಿರುವ ರಮಣ್, 'ಸರಣಿ ಘೋಷಣೆಗಳು ಆರಂಭವಾಗಿವೆ ಮತ್ತು ಅಧಿಕಾರಕ್ಕೆ ಮರಳುವುದಕ್ಕಾಗಿ ಅವರು ಯಾವುದೇ ಭರವಸೆ ನೀಡಲು ಹಿಂಜರಿಯುವುದಿಲ್ಲ. ಇಂತಹ ಆಶ್ವಾಸನೆಗಳನ್ನುಕೊಡುವ ಮೊದಲು, ಕಳೆದ ಮೂರು ವರ್ಷಗಳಲ್ಲಿ ಸಿಲಿಂಡರ್‌ಗಳನ್ನು₹ 500ಕ್ಕೆ ವಿತರಿಸಲಾಗಿದೆಯೇ ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು. ಚುನಾವಣೆಗೆ ಮುನ್ನ ಇಲ್ಲಿಯೂ (ಛತ್ತೀಸಗಡದಲ್ಲೂ) ಇಂತಹ ದೊಡ್ಡ ಘೋಷಣೆಗಳನ್ನು ನೀಡಲಾಗಿತ್ತು. ಇಂದು ಅವನ್ನೆಲ್ಲ ಕಸದ ಬುಟ್ಟಿಗೆ ಎಸೆಯಲಾಗಿದೆ' ಎಂದು ಟೀಕಿಸಿದ್ದಾರೆ.
ಕೇವಲ ವೋಟಿಗಾಗಿ ಇಂತಹ ಘೋಷಣೆಗಳನ್ನು ಮಾಡುತ್ತಿರುವ ಕಾಂಗ್ರೆಸ್ ಪಕ್ಷ, ಉತ್ತರಖಂಡದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ.
'ಕಾಂಗ್ರೆಸ್ ಪಕ್ಷವು ಕೇವಲ ಮತ ಗಳಿಕೆ ಸಲುವಾಗಿ ಇಂತಹ ಯೋಜನೆಗಳನ್ನು ಘೋಷಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಅಧಿಕಾರದಲ್ಲಿದ್ದರೂ ಆಗಿನಿಂದ ಇಂತಹ ಘೋಷಣೆಗಳನ್ನು ಮಾಡದೆ, ಈಗ ಈ ರೀತಿ ಪ್ರಕಟಿಸುತ್ತಿರುವುದು ಏಕೆ? ಅವರ ಸರ್ಕಾರ ಅಸ್ತಿತ್ವಕ್ಕೆ ಬರುವುದಿಲ್ಲ' ಎಂದುಕುಟುಕಿದ್ದಾರೆ.
70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಗೆ ಫೆಬ್ರುವರಿ14ರಂದು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ.