ADVERTISEMENT

ಬಿಹಾರ | ವಾಮಾಚಾರ ನಡೆಸಿ ಹತ್ಯೆ: ಒಂದೇ ಗ್ರಾಮದ 16 ಮಂದಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 8 ಜೂನ್ 2024, 16:13 IST
Last Updated 8 ಜೂನ್ 2024, 16:13 IST
   

ಔರಂಗಾಬಾದ್‌ (ಬಿಹಾರ): ವಾಮಾಚಾರ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಹತ್ಯೆಗೈದಿದ್ದ ಇಬ್ಬರು ಮಹಿಳೆಯರು ಸೇರಿ 16 ಮಂದಿಗೆ ಔರಂಗಾಬಾದ್‌ನ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆ ಆಲಿಸಿದ ಔರಂಗಾಬಾದ್‌ನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಧನಂಜಯ್‌ ಮಿಶ್ರಾ ಅವರು, ಪ್ರಕರಣದ ಎಲ್ಲ 16 ಅಪರಾಧಿಗಳಿಗೆ ತಲಾ ₹25,000 ದಂಡ ಹಾಗೂ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ವಾಮಾಚಾರ ನಡೆಸಿರುವ ಶಂಕೆ ಮೇರೆಗೆ ಜಗದೀಶ್‌ ರಾಮ್‌(65) ಎಂಬುವವರನ್ನು 2020ರ ಆಗಸ್ಟ್‌ 13ರಂದು ಇಬ್ರಾಹಿಂಪುರದಲ್ಲಿ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ, ಇದೀಗ ಶಿಕ್ಷೆಗೆ ಗುರಿಯಾಗಿರುವ ಎಲ್ಲ 16 ಮಂದಿಯ ಮೇಲೆ ಆರೋಪ ಹೊರಿಸಿ ಮೃತ ಜಗದೀಶ್‌ ಪತ್ನಿ ಕುಟುಂಬ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. 

ADVERTISEMENT

ಇಬ್ರಾಹಿಂಪುರದ ನಿವಾಸಿಗಳಾದ ಸುರೇಶ್‌ ರಾಮ್‌, ರವೀಂದ್ರ ರಾಮ್‌, ಸುರೇಂದ್ರ ರಾಮ್‌, ಸತ್ಯೇಂದ್ರ ರಾಮ್‌, ಮಹಾರಾಜ್‌ ರಾಮ್‌, ಉದಯ್‌ ರಾಮ್‌, ಶತೃಘನ್‌ ರಾಮ್‌, ವಿನೀತ್‌ ರಾಮ್‌, ಸುದಾಮ ರಾಮ್‌, ಬಲಿಂದರ್‌ ರಾಮ್‌, ರಾಕೇಶ್‌ ರಾಮ್‌, ರಾಮದೇವ್‌ ರಾಮ್‌, ರಾಜನ್‌ ರಾಮ್‌, ಮುಕೇಶ್‌ ರಾಮ್‌, ಮನೋರಮಾ ದೇವಿ ಹಾಗೂ ಲಲಿತಾ ದೇವಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.