ADVERTISEMENT

ಬಿಹಾರ: 2 ಲಕ್ಷ ಹುದ್ದೆ ಭರ್ತಿಗೆ ನಿತೀಶ್‌ ಸಜ್ಜು?

ಅಭಯ್ ಕುಮಾರ್
Published 21 ನವೆಂಬರ್ 2020, 2:23 IST
Last Updated 21 ನವೆಂಬರ್ 2020, 2:23 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ: ಬಿಹಾರ ವಿಧಾನಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕೂದಲೆಳೆಯಲ್ಲಿ ಗೆಲುವು ದಕ್ಕಿಸಿಕೊಂಡಿರುವ ನಿತೀಶ್‌ ಕುಮಾರ್‌, ಉದ್ಯೋಗ ನೀಡಿಕೆಯತ್ತ ಗಂಭೀರವಾಗಿ ಗಮನ ಹರಿಸಿದ್ದಾರೆ.

ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಅವರು 10 ಲಕ್ಷ ಮಂದಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಚುನಾವಣಾ ಪ್ರಚಾರದಲ್ಲಿ ಘೋಷಿಸಿದ್ದರು. ಇದು ಯುವ ಜನರ ಗಮನ ಅವರೆಡೆಗೆ ಹರಿಯುವಂತೆ ಮಾಡಿತ್ತು. ಚುನಾವಣೆಯಲ್ಲಿ ತೇಜಸ್ವಿ ನೀಡಿದ್ದ ಭರವಸೆಯನ್ನು ಈಡೇರಿಸುವತ್ತ ನಿತೀಶ್‌ ಅವರು ಗಮನ ಹರಿಸಿದ್ದಾರೆ.

ಸಾಮಾನ್ಯ ಆಡಳಿತ ಇಲಾಖೆಯು (ಜಿಎಡಿ) ಎಲ್ಲ ಇಲಾಖೆಗಳಿಗೆ ಪತ್ರ ಬರೆದು ಖಾಲಿ ಹುದ್ದೆಗಳು, ಗುತ್ತಿಗೆ ಉದ್ಯೋಗಿಗಳು, ಕಾಯಂ ಉದ್ಯೋಗಿಗಳು, ಒಟ್ಟು ಉದ್ಯೋಗಿಗಳು, ಮಂಜೂರಾಗಿರುವ ಹುದ್ದೆಗಳ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ.

ADVERTISEMENT

ಜಿಎಡಿ, ನಿತೀಶ್‌ ಕುಮಾರ್‌ ಅವರ ಅಧೀನದಲ್ಲಿಯೇ ಇರುವ ಇಲಾಖೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕನಿಷ್ಠ 2 ಲಕ್ಷ ಹುದ್ದೆಗಳನ್ನು ಮುಂದಿನ ವರ್ಷದ ಆರಂಭದಲ್ಲಿ ಭರ್ತಿ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

2021ರಲ್ಲಿ ಎರಡು ಲಕ್ಷ ನೇಮಕಾತಿಗಳು ಆಗಲಿವೆ. ಅದರಲ್ಲಿ 4,600 ಸಹಾಯಕ ಪ್ರಾಧ್ಯಾಪಕ, 1,050 ಕಿರಿಯ ಎಂಜಿನಿಯರ್‌, 27 ಸಾವಿರ ಪೊಲೀಸ್‌ ಹುದ್ದೆಗಳು ಸೇರಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿವಿಧ ಇಲಾಖೆಗಳಿಂದ ಮಾಹಿತಿ ಬಂದ ಬಳಿಕ ಹುದ್ದೆಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯೂ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.