ಪಟ್ನಾ: ಬಿಹಾರದ ಜಮುಯಿ ಜಿಲ್ಲೆಯ ‘ದೇಶದ ಅತಿದೊಡ್ಡ’ ಚಿನ್ನದ ನಿಕ್ಷೇಪದ ಅನ್ವೇಷಣೆಗೆ ಅನುಮತಿ ನೀಡಲು ಬಿಹಾರ ಸರ್ಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಿಎಸ್‌ಐ ಸಮೀಕ್ಷೆ ಪ್ರಕಾರ ಜಮುಯಿ ಜಿಲ್ಲೆಯಲ್ಲಿ 37.6 ಟನ್ ಖನಿಜಯುಕ್ತ ಅದಿರು ಸೇರಿದಂತೆ 222.88 ದಶಲಕ್ಷ ಟನ್ ಚಿನ್ನದ ಸಂಗ್ರಹವಿದೆ. ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಜಮುಯಿಯಲ್ಲಿನ ಚಿನ್ನದ ನಿಕ್ಷೇಪಗಳ ಅನ್ವೇಷಣೆಗಾಗಿ ಜಿಎಸ್‌ಐ ಮತ್ತು ಎನ್‌ಎಂಡಿಸಿ ಸೇರಿದಂತೆ ಅನ್ವೇಷಣೆಯಲ್ಲಿ ತೊಡಗಿರುವ ಇತರ ಏಜೆನ್ಸಿಗಳ ಜತೆ ಸಮಾಲೋಚನೆಯಲ್ಲಿ ತೊಡಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.