ADVERTISEMENT

ಒಳಾಂಗಣ ಗಿಡ ಬೆಳೆಸಿ, ಶುದ್ಧ ಆಮ್ಲಜನಕ ಪಡೆಯಿರಿ: ಬಿಹಾರ ಸರ್ಕಾರ

ಪಿಟಿಐ
Published 14 ಮೇ 2021, 17:02 IST
Last Updated 14 ಮೇ 2021, 17:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಮ್ಲಜನಕ ಲಭ್ಯತೆ ಮತ್ತು ಪೂರೈಕೆ, ಕೋವಿಡ್ 19 ಸೋಂಕಿನ ಭೀಕರತೆಯಿಂದ ಜನರು ಕಂಗೆಟ್ಟಿರುವಾಗ ಬಿಹಾರ ಸರ್ಕಾರ ಜನರು ಮನೆಯೊಳಗೆ ಗಿಡಗಳನ್ನು ಬೆಳೆಸುವಂತೆ ಕರೆ ನೀಡಿದೆ.

ಶುದ್ಧ ಮತ್ತು ಹೆಚ್ಚಿನ ಪ್ರಮಾಣದ ಆಮ್ಲಜನಕ ನೀಡುವ ಗಿಡಗಳನ್ನು ಮನೆಯೊಳಗೆ ಬೆಳೆಸಿ ಎನ್ನುವ ಆಶಯದೊಂದಿಗೆ ಶುಕ್ರವಾರ ಬಿಹಾರ ಸರ್ಕಾರ #NatureCuresYou ಎನ್ನುವ ಅಭಿಯಾನವನ್ನು ಪರಿಸರ, ಅರಣ್ಯ ಇಲಾಖೆ ಸಹಯೋಗದಲ್ಲಿ ಆರಂಭಿಸಿದೆ.

ಔಷಧೀಯ ಗುಣಗಳನ್ನು ಹೊಂದಿರುವ ಗಿಡಗಳನ್ನು ಮನೆಯೊಳಗೆ ಬೆಳೆಸುವುದರಿಂದ, ಸಹಜವಾಗಿ ಶುದ್ಧ ಆಮ್ಲಜನಕ ಜನರಿಗೆ ದೊರೆಯುತ್ತದೆ ಎಂದು ಸರ್ಕಾರ ಹೇಳಿದೆ.

ADVERTISEMENT

ಜತೆಗೆ ಅಭಿಯಾನದಡಿ ಜನರು ಗಿಲೊಯ್, ಕಾಲಿಮಿರ್ಚ್ ಮತ್ತು ಪಿಪ್ಪಾಲಿಯಂತಹ ಗಿಡಗಳನ್ನು ಸುಲಭದಲ್ಲಿ ಮನೆಯಲ್ಲಿಯೇ ಬೆಳೆಸುವಂತೆ ಕರೆ ನೀಡಿದೆ.

ಜತೆಗೆ ಸ್ನೇಕ್ ಪ್ಲ್ಯಾಂಟ್, ರಬ್ಬರ್ ಗಿಡ ಮತ್ತು ಅಡಿಕೆ ಗಿಡ ಕೂಡ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ನೀಡುವ ಗಿಡಗಳಾಗಿವೆ ಎಂದು ಇಲಾಖೆ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.