ADVERTISEMENT

ಮೀಸಲಾತಿ: ಸುಪ್ರೀಂ ಮೆಟ್ಟಿಲೇರಿದ ಬಿಹಾರ ಸರ್ಕಾರ

ಪಿಟಿಐ
Published 2 ಜುಲೈ 2024, 16:14 IST
Last Updated 2 ಜುಲೈ 2024, 16:14 IST
   

ನವದೆಹಲಿ: ಮೀಸಲಾತಿ ಮಿತಿ ಹೆಚ್ಚಿಸಿರುವುದನ್ನು ರದ್ದುಪಡಿಸಿ ಪಟ್ನಾ ಹೈಕೋರ್ಟ್‌ ನೀಡಿರುವ ತೀರ್ಪನ್ನು ‍ಪ್ರಶ್ನಿಸಿ ಬಿಹಾರ ಸರ್ಕಾರವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ದಲಿತರು, ಆದಿವಾಸಿಗಳು ಹಾಗೂ ಹಿಂದುಳಿದ ವರ್ಗಗಳಿಗೆ ನೀಡಲಾಗಿದ್ದ ಮೀಸಲಾತಿ ಮಿತಿಯನ್ನು ಶೇ 50ರಿಂದ ಶೇ 65ಕ್ಕೆ ಏರಿಸುವ ಸಂಬಂಧ ಬಿಹಾರ ಸರ್ಕಾರವು ತಿದ್ದುಪಡಿಗಳನ್ನು ತಂದಿತ್ತು. ಮೀಸಲಾತಿ ಹೆಚ್ಚಿಸಿದ್ದರ ವಿರುದ್ಧ ಪಟ್ನಾ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು.

ಈ ಅರ್ಜಿಗಳ ವಿಚಾರಣೆ ನಡೆಸಿದ ಪಟ್ನಾ ಹೈಕೋರ್ಟ್‌, ‘ಮೀಸಲಾತಿ ಮಿತಿಯನ್ನು ಏರಿಸುವ ಅಧಿಕಾರ ಸರ್ಕಾರಕ್ಕಿಲ್ಲ’. ‘ಇದು ಸಂವಿಧಾನಬಾಹಿರವಾಗುತ್ತದೆ’. ‘ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ’ ಹಾಗೂ ‘ಇದು ಸಮಾನತೆಯ ಹಕ್ಕಿನ ಉಲ್ಲಂಘನೆ’ ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.