ಪಟ್ನಾ: ಬಿಹಾರ ವಿಧಾನಸಭೆ ಸ್ಪೀಕರ್ ಅವಧ್ ಬಿಹಾರಿ ಚೌಧರಿ ವಿರುದ್ಧ ಆಡಳಿತಾರೂಢ ಎನ್‌ಡಿಎ ಸರ್ಕಾರ ಮಂಡಿಸಿದ ಅವಿಶ್ವಾಸ ನಿರ್ಣಯ ಸೋಮವಾರ ಅಂಗೀಕಾರಗೊಂಡಿದೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಹದಿನೈದು ದಿನಗಳ ಹಿಂದಷ್ಟೇ 'ಮಹಾಘಟಬಂಧನ್' ಮೈತ್ರಿಕೂಟದಿಂದ ಹೊರ ಬಂದು, ಬಿಜೆಪಿಯೊಂದಿಗೆ ಹೊಸ ಸರ್ಕಾರ ರಚಿಸಿದೆ.
ಅವಧ್ ಬಿಹಾರಿ ಚೌಧರಿ ಅವರು ಆರ್‌ಜೆಡಿಯ ಪಕ್ಷದವರಾಗಿದ್ದು, ಅವರ ಪಕ್ಷ ಇದೀಗ ಅಧಿಕಾರ ಕಳೆದುಕೊಂಡಿದೆ. ಆದಾಗ್ಯೂ ಚೌಧರಿ ಅವರು ತಮ್ಮ ಸ್ಥಾನದಿಂದ ಕೆಳಗಿಳಿಯಲು ನಿರಾಕರಿಸಿದ್ದರು. ಹೀಗಾಗಿ ಹೊಸ ಸರ್ಕಾರವು ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿತ್ತು.
ಬಿಜೆಪಿ ಶಾಸಕ ನಂದಕಿಶೋರ್ ಯಾದವ್ ಮಂಡಿಸಿದ ಅವಿಶ್ವಾಸ ನಿರ್ಣಯದ ಪರ 125 ಶಾಸಕರು ಮತ್ತು ವಿರುದ್ಧ 112 ಮಂದಿ ಮತ ಚಲಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.