ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಆಪರಾಧಿಗಳನ್ನು ಬಿಡುಗಡೆ ಮಾಡಿದ ಗುಜರಾತ್ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಪ್ರಕರಣ ನಡೆದ ದಿನದಿಂದ ಈವರೆಗಿನ ಘಟನಾವಳಿಗಳು ಇಲ್ಲಿವೆ.
2002 ಮಾರ್ಚ್ 3: ಗುಜರಾತ್ ಅಹಮದಾಬಾದ್‌ನ ರಂಧಿಕ್‌ಪುರ ಗ್ರಾಮದ ಮುಸ್ಲಿಂ ಕುಟುಂಬವೊಂದರ ಮೇಲೆ ಗುಂಪಿನಿಂದ ದಾಳಿ. ಏಳು ಮಂದಿಯ ಹತ್ಯೆ. ಕುಟುಂಬದ ಸದಸ್ಯೆ, 21 ವರ್ಷ ವಯಸ್ಸಿನ ಬಿಲ್ಕಿಸ್ ಬಾನು ಅವರ ಮೇಲೆ ಸಾಮೂಹಿಕ ಅತ್ಯಾಚಾರ
2003 ಡಿಸೆಂಬರ್: ಬಿಲ್ಕಿಸ್ ಬಾನು ಪ್ರಕರಣದ ತನಿಖೆ ನಡೆಸಲು ಸಿಬಿಐಗೆ ಸುಪ್ರೀಂ ಕೋರ್ಟ್ ನಿರ್ದೇಶನ
2008 ಜನವರಿ 21: ಬಿಲ್ಕಿಸ್ ಬಾನು ಅತ್ಯಾಚಾರ ಮತ್ತು ಏಳು ಮಂದಿ ಹತ್ಯೆ ಪ್ರಕರಣದಲ್ಲಿ 11 ಮಂದಿಯ ಅಪರಾಧ ಸಾಬೀತುಪಡಿಸಿದ ವಿಶೇಷ ನ್ಯಾಯಾಲಯದಿಂದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
2016 ಡಿಸೆಂಬರ್: 11 ಅಪರಾಧಿಗಳು ಸಲ್ಲಿಸಿದ್ದ ಅರ್ಜಿಯ ತೀರ್ಪು ತಡೆಹಿಡಿದ ಬಾಂಬೆ ಹೈಕೋರ್ಟ್
2017 ಮೇ: ಅಪರಾಧಿಗಳ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಬಾಂಬೆ ಹೈಕೋರ್ಟ್
2019 ಏಪ್ರಿಲ್ 23: ಬಿಲ್ಕಿಸ್ ಬಾನು ಅವರಿಗೆ ₹50 ಲಕ್ಷ ಪರಿಹಾರ ನೀಡಲು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶ
2022 ಮೇ 13: ಅವಧಿಗೂ ಮುನ್ನ ಬಿಡುಗಡೆಗೊಳಿಸಬೇಕು ಎಂದು ಕೋರಿ ಅಪರಾಧಿಗಳಲ್ಲಿ ಒಬ್ಬರು ಸಲ್ಲಿಸಿದ್ದ ಅರ್ಜಿಯನ್ನು 1992 ಜುಲೈ 9ರ ಗುಜರಾತ್ ಕ್ಷಮಾಪಣೆ ನೀತಿ ಅಡಿಯಲ್ಲಿ ಪರಿಗಣಿಸಲು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನ
2022 ಆಗಸ್ಟ್ 15: ಗುಜರಾತ್ ಸರ್ಕಾರದ ಕ್ಷಮಾಪಣೆ ನೀತಿ ಅಡಿ 11 ಮಂದಿ ದೋಷಿಗಳನ್ನು ಬಿಡುಗಡೆಗೊಳಿಸಿದ ಗೋದ್ರಾ ಉಪ ಕಾರಾಗೃಹ
2022 ಆಗಸ್ಟ್ 25: ಅಪರಾಧಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಸಿಪಿಐ ಸಂಸದೆ ಸುಭಾಷಿಣಿ ಆಲಿ, ಪತ್ರಕರ್ತೆ ರೇವತಿ ಲೌಲ್ ಮತ್ತು ಪ್ರೊ. ರೂಪ್ ರೇಖಾ ವರ್ಮ ಅವರು ಜಂಟಿಯಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್. ಕೇಂದ್ರ ಮತ್ತು ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ
2022 ನವೆಂಬರ್ 30: ಗುಜರಾತ್ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ ಬಿಲ್ಕಿಸ್ ಬಾನು. ‘ದೋಷಿಗಳ ಅವಧಿಪೂರ್ವ ಬಿಡುಗಡೆಯು ಸಮಾಜದ ಅಂತಃಸಾಕ್ಷಿಯನ್ನು ಕಲುಕಿದೆ’ ಎಂದ ಬಿಲ್ಕಿಸ್
2022 ಡಿಸೆಂಬರ್ 17: ಅವಧಿಪೂರ್ವ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿ ಪರಿಶೀಲಿಸಲು ಗುಜರಾತ್ ಸರ್ಕಾರವೇ ಸೂಕ್ತ ಎಂದು 2022ರ ಮೇ 13ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಮರು ಪರಿಶೀಲನೆಗೆ ಒಳಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ ಬಿಲ್ಕಿಸ್. ಅರ್ಜಿ ತಿರಸ್ಕರಿಸಿದ ಕೋರ್ಟ್
2023 ಮಾರ್ಚ್ 27: ಬಿಲ್ಕಿಸ್ ಸಲ್ಲಿಸಿದ್ದ ಅರ್ಜಿ ಕುರಿತು ಕೇಂದ್ರ, ಗುಜರಾತ್ ಸರ್ಕಾರ ಮತ್ತು ಇತರರಿಗೆ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್
2023 ಆಗಸ್ಟ್ 7: ಶಿಕ್ಷೆಯ ಅವಧಿ ತಗ್ಗಿಸಿದ ಗುಜರಾತ್ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಗಳ ಅಂತಿಮ ವಿಚಾರಣೆ ಆರಂಭಿಸಿದ ಸುಪ್ರೀಂ ಕೋರ್ಟ್
2023 ಅಕ್ಟೋಬರ್ 12: 11 ದಿನಗಳ ಕಾಲ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ತೀರ್ಪು ಕಾಯ್ದಿರಿಸಿತು
2024 ಜನವರಿ 8: 11 ಮಂದಿ ಅಪರಾಧಿಗಳಿಗೆ ನೀಡಿದ್ದ ಕ್ಷಮಾದಾನವನ್ನು ರದ್ದುಪಡಿಸಿದ ಸುಪ್ರೀಂ ಕೋರ್ಟ್. ಎರಡು ವಾರಗಳ ಒಳಗೆ ಜೈಲು ಅಧಿಕಾರಿಗಳ ಎದುರು ಹಾಜರಾಗಲು ಅಪರಾಧಿಗಳಿಗೆ ನಿರ್ದೇಶನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.