ADVERTISEMENT

ಮಹಿಳೆಯರ ಮದುವೆ ವಯಸ್ಸು ಹೆಚ್ಚಳ ಮಸೂದೆ ಲೋಕಸಭೆಯಲ್ಲಿ ಮಂಡನೆ

ವಿಪಕ್ಷಗಳ ಸದಸ್ಯರಿಂದ ಪ್ರತಿಭಟನೆ * ಸದನ ಸಮಿತಿಗೆ ಮಸೂದೆ ಒಪ್ಪಿಸಲು ಸಚಿವೆ ಇರಾನಿ ಒತ್ತಾಯ

ಪಿಟಿಐ
Published 21 ಡಿಸೆಂಬರ್ 2021, 13:46 IST
Last Updated 21 ಡಿಸೆಂಬರ್ 2021, 13:46 IST
ಸ್ಮೃತಿ ಇರಾನಿ
ಸ್ಮೃತಿ ಇರಾನಿ   

ನವದೆಹಲಿ: ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು 21ಕ್ಕೆ ಏರಿಸುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಮಂಡಿಸಲಾಯಿತು.

ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಮಸೂದೆಯನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಂಡಿಸಿದರು. ಪರಿಶೀಲನೆಗಾಗಿ ಮಸೂದೆಯನ್ನು ಸಂಸದೀಯ ಸಮಿತಿಗೆ ಒಪ್ಪಿಸುವಂತೆ ಅವರು ಸ್ಪೀಕರ್‌ಗೆ ಒತ್ತಾಯಿಸಿದರು.

ಮಹಿಳೆಯರ ಮದುವೆಯ ಕನಿಷ್ಠ ವಯಸ್ಸನ್ನು ಈಗಿನ 18 ವರ್ಷದಿಂದ 21 ವರ್ಷಕ್ಕೆ ಏರಿಸುವುದಕ್ಕೆ ಅವಕಾಶ ನೀಡುವ ‘ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಮಸೂದೆ–2021’ ಅನ್ನು ಮಂಡಿಸಿ ಮಾತನಾಡಿದ ಸಚಿವೆ ಇರಾನಿ, ‘ಯಾವುದೇ ಪದ್ಧತಿ, ಸಂಪ್ರದಾಯಗಳನ್ನು ಒಳಗೊಂಡಂತೆ ಮದುವೆಗೆ ಸಂಬಂಧಿಸಿ ಸದ್ಯ ಜಾರಿಯಲ್ಲಿರುವ ಎಲ್ಲ ಕಾಯ್ದೆಗಳು ಈ ಮಸೂದೆ ಅಂಗೀಕಾರಗೊಂಡ ನಂತರ ರದ್ದಾಗುವವು’ ಎಂದು ಹೇಳಿದರು.

ADVERTISEMENT

ಆದರೆ, ಲಖೀಂಪುರ ಖೇರಿಯಲ್ಲಿ ರೈತರ ಹತ್ಯೆ ಸೇರಿದಂತೆ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ಮುಂದುವರಿಸಿದರು. ನಂತರ, ಸಮಗ್ರ ಪರಿಶೀಲನೆಗಾಗಿ ಮಸೂದೆಯನ್ನು ಸದನ ಸಮಿತಿಗೆ ಒಪ್ಪಿಸಿ, ಸದನವನ್ನು ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.