ADVERTISEMENT

ಚಿತ್ರ ವೀಕ್ಷಿಸಿ ನಿರ್ಧಾರ ತಿಳಿಸಲು ಆಯೋಗಕ್ಕೆ ‘ಸುಪ್ರೀಂ’ ನಿರ್ದೇಶನ

‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ ಬಿಡುಗಡೆಗೆ ನಿಷೇಧ

ಪಿಟಿಐ
Published 15 ಏಪ್ರಿಲ್ 2019, 18:13 IST
Last Updated 15 ಏಪ್ರಿಲ್ 2019, 18:13 IST
‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ
‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆ ಆಧರಿಸಿದ ಚಲನಚಿತ್ರವನ್ನು ಸಂಪೂರ್ಣವಾಗಿ ವೀಕ್ಷಿಸಿ ಏಪ್ರಿಲ್‌ 19 ರೊಳಗೆ ಮುಚ್ಚಿದ ಲಕೋಟೆಯಲ್ಲಿ ನಿರ್ಧಾರವನ್ನು ತಿಳಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ನೇತೃತ್ವದ ಪೀಠವು ಈ ನಿರ್ದೇಶನ ನೀಡಿ, ಏಪ್ರಿಲ್‌ 22 ರಂದು ಈ ವಿಷಯದ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಚಿತ್ರ ನಿರ್ಮಾಪಕರ ಪರ ಹಾಜರಾದ ಹಿರಿಯ ವಕೀಲ ಮುಕುಲ್‌ ರೋಹಟಗಿ, ಸಂಪೂರ್ಣ ಚಲನಚಿತ್ರ ನೋಡದೇ ಚುನಾವಣಾ ಆಯೋಗವು ಚಿತ್ರ ಬಿಡುಗಡೆಗೆ ನಿಷೇಧ ವಿಧಿಸಿದೆ ಎಂದರು. ಆಯೋಗದ ಕ್ರಮವನ್ನು ಪ್ರಶ್ನಿಸಿ ಅವರು ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಶುಕ್ರವಾರದ (ಏ.19) ಹೊತ್ತಿಗೆ ತನ್ನ ನಿರ್ಧಾರ ತಿಳಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಚುನಾವಣಾ ಆಯೋಗ ಅಥವಾ ಅದರ ಸಮಿತಿಗಾಗಿ ವಿಶೇಷ ಪ್ರದರ್ಶನ ಆಯೋಜಿಸಲಾಗುವುದು ಎಂದು ಅವರು ಕೋರ್ಟ್‌ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.