ಪ್ಯಾರಿಸ್: ಬಿಹಾರದಲ್ಲಿ H5N1 (ಹಕ್ಕಿ ಜ್ವರ) ವೈರಸ್ ವಿಪರೀತ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ ಎಂದು ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ (OIE) ಬುಧವಾರ ಹೇಳಿದೆ.
ಕೋಳಿ ಸಾಕಣಿಕೆ ಕೇಂದ್ರವೊಂದರಲ್ಲಿ ಸಂಸ್ಥೆ ಅಧ್ಯಯನ ನಡೆಸಿ ವರದಿ ಬಿಡುಗಡೆ ಮಾಡಿದ್ದು, ಬಿಹಾರದ ಪಾಟ್ನಾದ ಫಾರ್ಮ್ ಒಂದರಲ್ಲಿದ್ದ 3,859 ಕೋಳಿಗಳ ಪೈಕಿ 787 ಕೋಳಿಗಳು ವೈರಸ್‌ನಿಂದಾಗಿ ಸಾವಿಗೀಡಾಗಿದೆ ಎಂದು ಹೇಳಿದೆ. ಉಳಿದ ಕೋಳಿಗಳನ್ನು ನಾಶಪಡಿಸಲಾಗಿದೆ.
ಪ್ಯಾರಿಸ್ ಮೂಲದ ಒಐಇ, ಭಾರತದಲ್ಲಿನ ಅಧಿಕೃತ ಮೂಲಗಳು ಮತ್ತು ದತ್ತಾಂಶಗಳನ್ನು ಆಧರಿಸಿ ವರದಿ ಬಿಡುಗಡೆ ಮಾಡಿದೆ.
ಜನವರಿ 18ರಂದು ಹಕ್ಕಿಜ್ವರ ವೈರಸ್ ಕಾಣಿಸಿಕೊಂಡಿತ್ತು. ಫೆಬ್ರುವರಿ 16ರಂದು ಪಾಟ್ನಾದ ಫಾರ್ಮ್‌ನಲ್ಲಿ ಗರಿಷ್ಠ ಪ್ರಮಾಣದಲ್ಲಿ ಕೋಳಿಗಳು ವೈರಸ್ ದಾಳಿಯಿಂದಾಗಿ ಸಾವಿಗೀಡಾಗಿವೆ, ಉಳಿದಿರುವ ಎಲ್ಲ ಕೋಳಿಗಳನ್ನು ನಾಶಪಡಿಸಲಾಗಿದೆ ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.