ನವದೆಹಲಿ: 2021–22ನೇ ಸಾಲಿನಲ್ಲಿ ಭಾರತೀಯ ಜನತಾ ಪಕ್ಷ ಒಟ್ಟು ₹1,917.12 ಕೋಟಿ ದೇಣಿಗೆ ಪಡೆದುಕೊಂಡಿದ್ದು, ಅದರಲ್ಲಿ ₹854.46 ಕೋಟಿ ಮೊತ್ತವನ್ನು ವೆಚ್ಚವೆಂದು ನಮೂದಿಸಿದೆ.
ಚುನಾವಣಾ ಬಾಂಡ್‌ಗಳ ಮೂಲಕ ಬಿಜೆಪಿ ಈ ಅವಧಿಯಲ್ಲಿ ₹1,033.7 ಕೋಟಿ ಪಡೆದುಕೊಂಡಿದೆ ಎಂದು ವರದಿ ಹೇಳಿದೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ₹541.27 ಕೋಟಿ ಮೊತ್ತವನ್ನು ದೇಣಿಗೆ ಪಡೆದುಕೊಂಡಿದ್ದರೆ, ಅದರಲ್ಲಿ ₹400.41 ಕೋಟಿ ವೆಚ್ಚವಾಗಿದೆ. ಅದರಲ್ಲಿ ₹347.99 ಕೋಟಿ ಮೊತ್ತವನ್ನು ವಿವಿಧ ಮೂಲಗಳಿಂದ ದೇಣಿಗೆ, ಕೊಡುಗೆ ಮತ್ತು ಅನುದಾನದ ಮೂಲಕ ಪಡೆದುಕೊಂಡಿದೆ.
ಇದೇ ಅವಧಿಯಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ₹2.87 ಕೋಟಿ ದೇಣಿಗೆ ಪಡೆದುಕೊಂಡಿದ್ದು, ₹1.18 ಕೋಟಿ ವೆಚ್ಚವೆಂದು ನಮೂದಿಸಿದೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಈ ಪಕ್ಷಗಳು ಪಡೆದುಕೊಂಡಿರುವ ದೇಣಿಗೆ ಮತ್ತು ವೆಚ್ಚಗಳ ವಿವರವನ್ನು ಬಹಿರಂಗಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.