ನವದೆಹಲಿ: ರಾಹುಲ್ ಗಾಂಧಿ ಅವರು ಅಮೆರಿಕ ಭೇಟಿ ಸಂದರ್ಭದಲ್ಲಿ ಸಿಖ್ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಹಲವು ಸಿಖ್ ಸಂಘಟನೆಗಳು ಆಗ್ರಹಿರುವ ಜಂಟಿ ಹೇಳಿಕೆಯನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಅವರು, ‘ಹಲವು ಸಿಖ್ ಮತ್ತು ಗುರುದ್ವಾರ ನಿರ್ವಹಣಾ ಸಂಸ್ಥೆಗಳು ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂತ ರಾಯ್ ಅವರನ್ನು ಭೇಟಿ ಮಾಡಿವೆ. ಸಿಖ್ಖರು ಮಾಡಿರುವ ತ್ಯಾಗವು ಈ ದೇಶವನ್ನು ಬಲಿಷ್ಠವನ್ನಾಗಿಸಿದೆ’ ಎಂದು ಹೇಳಿದರು.
ಸಿಖ್ ವಿರೋಧಿ ದಂಗೆ–1984ಕ್ಕೂ ಮೊದಲು ಸಿಖ್ ಸಮುದಾಯವನ್ನು ಗುರಿ ಮಾಡಲಾಗಿತ್ತು. ಈಗಲೂ ಅಂಥದ್ದೇ ವಾತಾವರಣ ನಿರ್ಮಾಣ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.