ಲಖನೌ: ಬಿಜೆಪಿಯ ಆಡಳಿತದಲ್ಲಿ ಮಾಧ್ಯಮಗಳ ಮೇಲೆ ದೌರ್ಜನ್ಯ ಎಸಗಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ. ಅಲ್ಲದೆ ಮಾಧ್ಯಮಗಳ ನೈತಿಕ ಸ್ಥೈರ್ಯವನ್ನೇ ನಾಶ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ವ್ಯಕ್ತಿಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವ ವಿಡಿಯೊ ಒಂದನ್ನು ಎಕ್ಸ್‌ನಲ್ಲಿ ಹಂಚಿಕೊಂಡು ಅವರು ಹೀಗೆ ಬರೆದುಕೊಂಡಿದ್ದಾರೆ.
‘ಪತ್ರಕರ್ತರ ಕೊಲೆ, ಪತ್ರಕರ್ತರ ಮೇಲೆ ಒತ್ತಡ ಹೇರುವುದು, ಪತ್ರಕರ್ತರಿಗೆ ಮಾಸಿಕ ಭಕ್ಷೀಸು ನೀಡುವುದು, ಪತ್ರಕರ್ತರ ವಿರುದ್ಧ ಎಫ್‌ಐಆರ್, ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸುವುದು, ಬೇಡದ್ದನ್ನೆಲ್ಲಾ ಕುಡಿಯುವಂತೆ ಅವರನ್ನು ಒತ್ತಾಯಪಡಿಸುವುದು.. ಬಿಜೆಪಿ ಆಡಳಿತದಲ್ಲಿ ನಡೆಯುತ್ತಿದೆ. ಮಾಧ್ಯಮಗಳ ನೈತಿಕ ಸ್ಥೈರ್ಯ ನಾಶ ಮಾಡುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.
‘ನಮಗೆ ಬಿಜೆಪಿ ಬೇಡ ಎಂದು ಇಂದಿನ ಮಾಧ್ಯಮಗಳು ಹೇಳುತ್ತಿವೆ’ ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಅಖಿಲೇಶ್ ಅವರ ಪೋಸ್ಟ್‌ಗೆ ಹಮೀರ್‌ಪುರ ಪೊಲೀಸರು ಉತ್ತರಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.