ADVERTISEMENT

ಸೈನಿಕರ ಹೊಸ ಪಿಂಚಣಿ ನೀತಿ: ಬಿಜೆಪಿ ವಿರುದ್ಧ ಖರ್ಗೆ ವಾಗ್ದಾಳಿ

ಪಿಟಿಐ
Published 30 ಸೆಪ್ಟೆಂಬರ್ 2023, 10:52 IST
Last Updated 30 ಸೆಪ್ಟೆಂಬರ್ 2023, 10:52 IST
<div class="paragraphs"><p>ಮಲ್ಲಿಕಾರ್ಜುನ ಖರ್ಗೆ</p></div>

ಮಲ್ಲಿಕಾರ್ಜುನ ಖರ್ಗೆ

   

ಚಿತ್ರ:  ಪಿಟಿಐ

ನವದೆಹಲಿ: ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾದ ಸೈನಿಕರಿಗೆ ನೀಡಲಾಗುವ ಪಿಂಚಣಿಯ ಹೊಸ ನೀತಿ ಕುರಿತಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

‘ಬಿಜೆಪಿಯ ಹುಸಿ ರಾಷ್ಟ್ರೀಯತೆ ಈ ನಡೆ ಮೂಲಕ ಗೋಚರವಾಗುತ್ತಿದೆ. ಸೈನಿಕರು, ಮಾಜಿ ಸೇನಾ ಸಿಬ್ಬಂದಿಯ ಕಲ್ಯಾಣದ ವಿರುದ್ಧ ಕೆಲಸ ಮಾಡುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಯಾವಾಗಲೂ ನಿರತವಾಗಿದೆ’ ಎಂದು ಖರ್ಗೆ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ಪ್ರಸ್ತುತ, ಶೇಕಡ 40ರಷ್ಟು ಸೈನಿಕರು ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿದ್ದಾರೆ. ಪ್ರಸ್ತುತ ನೀತಿಯು ಈ ಹಿಂದಿನ ಅನೇಕ ತೀರ್ಪುಗಳು, ನಿಯಮಗಳು ಮತ್ತು ಸ್ವೀಕಾರಾರ್ಹ ಮಾನದಂಡಗಳನ್ನು ಉಲ್ಲಂಘಿಸುತ್ತದೆ’ ಎಂದಿದ್ದಾರೆ.

‘2019ರ ಜೂನ್‌ನಲ್ಲಿ ಸಹ ಈ ಪಿಂಚಣಿ ಮೇಲೆ ತೆರಿಗೆ ಹೇರುವುದಾಗಿ ಘೋಷಿಸಿದ್ದ ಮೋದಿ ನೇತೃತ್ವದ ಸರ್ಕಾರ, ಆಗಲೂ ಸೈನಿಕರಿಗೆ ದ್ರೋಹ ಎಸಗಿತ್ತು’ ಎಂದು ಕಿಡಿಕಾರಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ, ವೈದ್ಯಕೀಯ ಕಾರಣಗಳಿಂದ ಕರ್ತವ್ಯ ನಿರ್ವಹಿಸಲು ಅಸಮರ್ಥರಾದ ಸೈನಿಕರು ಹಾಗೂ ಮೃತ ಸೈನಿಕರ ವಿಧವಾ ಪತ್ನಿಯರಿಗೆ ನೀಡಲಾಗುವ ಪಿಂಚಣಿಯ ನೂತನ ನೀತಿಗೆ ಅಖಿಲ ಭಾರತೀಯ ಮಾಜಿ ಸೈನಿಕರ ಕಲ್ಯಾಣ ಸಂಘವು ವಿರೋಧ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.