ADVERTISEMENT

ಬಿಜೆಪಿಯ ಸಂಸ್ಥಾಪನಾ ದಿನವನ್ನು ಹೀಗೆ ಆಚರಿಸಿ: ಪಕ್ಷದಿಂದ ಮಾರ್ಗಸೂಚಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 5:13 IST
Last Updated 6 ಏಪ್ರಿಲ್ 2020, 5:13 IST
   
""

ಬೆಂಗಳೂರು: ಬಿಜೆಪಿಯು ಸ್ಥಾಪನೆಗೊಂಡು ಇಂದಿಗೆ 40 ವರ್ಷಗಳು ಪೂರ್ಣಗೊಂಡಿದ್ದು, ಪಕ್ಷದ ಸಂಸ್ಥಾಪನಾ ದಿನ ಆಚರಿಸಲು ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕಾರ್ಯಕರ್ತರಿಗೆ ಮಾರ್ಗಸೂಚಿಗಳನ್ನು ನೀಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ.

ಏನದು ಮಾರ್ಗಸೂಚಿಗಳು?

ADVERTISEMENT

– ಪಕ್ಷದ ಕಚೇರಿಯಲ್ಲಿ ಮತ್ತು ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಪಕ್ಷದ ಹೊಸ ಬಾವುಟವನ್ನು ಹಾರಿಸಬೇಕು. ಆದರೆ ಈ ವೇಳೆ ಸಾಮಾಜಿಕ ಅಂತರವನ್ನು ಪಾಲಿಸಬೇಕು.

–ಡಾ ಶ್ಯಾಮ ಪ್ರಸಾದ್‌ ಮುಖರ್ಜಿ ಮತ್ತು ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಫೋಟೋಗಳಿಗೆ ಪುಷ್ಪಾಂಜಲಿ ಅರ್ಪಿಸಬೇಕು.

–ಲಾಕ್‌ ಡೌನ್‌ನ ಈ ಸಂದರ್ಭದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದವರಿಗಾಗಿ ಬಿಜೆಪಿಯ ಎಲ್ಲ ಕಾರ್ಯಕರ್ತರು ಒಂದು ಹೊತ್ತಿನ ಭೋಜನ ತ್ಯಜಿಸಬೇಕು. ಇದರ ಮೂಲಕ ಅವರ ಸಂಕಷ್ಟದ ವಿರುದ್ಧ ನಾವು ಒಗ್ಗಟ್ಟ ಪ್ರದರ್ಶಿಸಬೇಕು.

– #FeedtheNeddyಕಾರ್ಯಕ್ರಮದ ಅಡಿಯಲ್ಲಿ ಅಗತ್ಯವಿರುವವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಬೇಕು.

–ಮುಂದಿನ ಒಂದು ವಾರದಲ್ಲಿ ಬೂತ್‌ ಮಟ್ಟದಲ್ಲಿ ಎಲ್ಲರಿಗೂ ಎರಡೆರಡು ಗೃಹ ತಯಾರಿಕೆಯ ಫೇಸ್‌ ಕವರ್‌ (ಮುಖಗವಸು) ಅನ್ನು ವಿತರಿಸುವ ವ್ಯವಸ್ಥೆ ಜಾರಿಗೆ ಬರಲಿದೆ. ಫೇಸ್‌ ಕವರ್‌ ತಯಾರಿಸುವ ಮತ್ತು ವಿತರಿಸುವ ವಿಡಿಯೋವನ್ನು #WearFaceCoverStaySafe ಅಡಿಯಲ್ಲಿ ವ್ಯಾಪಕವಾಗಿ ಹಂಚಬೇಕು.

– ಪಕ್ಷಕ್ಕೆ 40 ವರ್ಷ ಪೂರೈಸಿರುವ ಈ ಹೊತ್ತಿನಲ್ಲಿ ನಮ್ಮ ಪ್ರತಿ ಕಾರ್ಯಕರ್ತರು 40 ಮಂದಿಯನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ₹100 ದೇಣಿಗೆ ನೀಡುವಂತೆ ಪ್ರೇರೇಪಿಸಬೇಕು

– ಪ್ರತಿ ಕಾರ್ಯಕರ್ತರು 40 ಮನೆಗಳಿಗೆ ತೆರಳಿ ಕೊರೊನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ಪೊಲೀಸ್‌, ವೈದ್ಯರು ಮತ್ತು ದಾದಿಯರು, ಸಫಾಯಿ ಕರ್ಮಚಾರಿಗಳು, ಬ್ಯಾಂಕ್‌–ಅಂಚೆ ಇಲಾಖೆ ನೌಕರರು, ಸರ್ಕಾರಿ ಮತ್ತು ನಾಗರಿಕ ಸೇವಾ ಸಿಬ್ಬಂದಿಗಳಿಗೆ ಧನ್ಯವಾದ ಪತ್ರಗಳನ್ನು ಬರೆಸಿಕೊಳ್ಳಬೇಕು.
ಪತ್ರಗಳನ್ನು ಸ್ತಳೀಯವಾಗಿ ನಮಗೆ ಪರಿಚಯವಿರುವ ಈ ಐದು ರಂಗದವರಿಗೆ ನೀಡಬೇಕು.

– ಬಿಜೆಪಿ ಪಕ್ಷ ಮತ್ತು ಪಕ್ಷದ ನಾಯಕರ ಕುರಿತ ಸಾಹಿತ್ಯ, ಲೇಖನಗಳನ್ನು ಓದಲು ಆರಂಭಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.