ADVERTISEMENT

ಸಿಖ್ಖರ ಬಗ್ಗೆ ಬಿಜೆಪಿ ನಾಯಕಿ ಕಿರಣ್ ಬೇಡಿ ಕುಹಕ: ವ್ಯಾಪಕ ಖಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜೂನ್ 2022, 16:28 IST
Last Updated 14 ಜೂನ್ 2022, 16:28 IST
ಕಿರಣ್ ಬೇಡಿ
ಕಿರಣ್ ಬೇಡಿ    

ನವದೆಹಲಿ: ಬಿಜೆಪಿ ನಾಯಕಿ ಹಾಗೂ ಪುದುಚೇರಿಯ ಮಾಜಿ ಲೆಪ್ಟಿನಂಟ್ ಗವರ್ನರ್ ಕಿರಣ್ ಬೇಡಿ ಅವರು ಸಿಖ್‌ರ ಬಗ್ಗೆ ಅವಹೇಳನಕಾರಿ ಹಾಸ್ಯಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕಿರಣ್ ಬೇಡಿ ಅವರ ವಿರುದ್ಧ ಸಿಖ್ ಸಮುದಾಯದ ಅನೇಕರು ಕಿಡಿಕಾರಿದ್ಧಾರೆ. ಅಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಚೆನ್ನೈನಲ್ಲಿ ಸೋಮವಾರ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿಖ್‌ರ ಸರ್ದಾರ್ಜಿಗಳ ಬಗ್ಗೆ ಕೀಳು ಅಭಿರುಚಿಯ ವ್ಯಂಗ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ADVERTISEMENT

ಈ ಬಗ್ಗೆ ಟ್ವೀಟ್ ಮಾಡಿ ಕ್ಷಮೆ ಕೇಳಿರುವ ಕಿರಣ್ ಬೇಡಿ ಅವರು, ‘ನನ್ನ ಸಮುದಾಯದ ಬಗ್ಗೆ ನಾನು ಅತೀವ ಗೌರವ ಹೊಂದಿದ್ದೇನೆ. ನಿನ್ನೆ ನಾನು ಆಡಿದ ಮಾತುಗಳಿಗೆ ನಾನೇ ಜವಾಬ್ದಾರಿ. ಇದನ್ನು ಯಾರ ಮನಸ್ಸು ನೋಯಿಸಲು ಆಡಿರಲಿಲ್ಲ. ಇದಕ್ಕಾಗಿ ಬಹಿರಂಗವಾಗಿ ನಿಮ್ಮ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.

ಸಿಖ್ ಸಮುದಾಯದ ಅನೇಕರು ಕಿರಣ್ ಬೇಡಿ ಅವರ ವಿವಾದಿತ ವಿಡಿಯೊ ಹಂಚಿಕೊಂಡು ಅವರ ವಿರುದ್ಧ ಬಿಜೆಪಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ತಾಣಗಳಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.