ADVERTISEMENT

ಪ್ರಧಾನಿ ಜನ್ಮದಿನದಂದು ಪ್ರಚಾರಕ್ಕಾಗಿ ರಕ್ತದಾನ ಮಾಡಿದ ಬಿಜೆಪಿ ನಾಯಕ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2024, 13:17 IST
Last Updated 20 ಸೆಪ್ಟೆಂಬರ್ 2024, 13:17 IST
<div class="paragraphs"><p>ರಕ್ತದಾನ</p></div>

ರಕ್ತದಾನ

   

(ಸಾಂಕೇತಿಕ ಚಿತ್ರ)

ಲಖನೌ: ಉತ್ತರ ಪ್ರದೇಶದ ಮೊರಾದಾಬಾದ್ ನಗರದ ಮೇಯರ್‌ ಮತ್ತು ಬಿಜೆಪಿ ಹಿರಿಯ ನಾಯಕ ವಿನೋದ್ ಅಗರ್ವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಪ್ರಚಾರಕ್ಕಾಗಿ ರಕ್ತದಾನ ಮಾಡಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಭಾಗಿಯಾಗಿದ್ದ ಮೇಯರ್‌, ರಕ್ತದಾನಕ್ಕೆ ಹಾಸಿಗೆ ಮೇಲೆ ಮಲಗಿದ್ದು, ವೈದ್ಯರು ರಕ್ತ ತೆಗೆಯಲು ಸೂಜಿ ತಂದ ತಕ್ಷಣವೇ ಮೇಯರ್‌ ಹಾಸಿಗೆಯಿಂದ ಎದ್ದು ಕೋಣೆಯಿಂದ ಹೊರ ನಡೆದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ವೈರಲ್ ಆದ ವಿಡಿಯೊ ಕುರಿತು ಪ್ರತಿಕ್ರಿಯಿಸಿದ ಮೇಯರ್, ‘ಇದು ನನ್ನ ಎದುರಾಳಿಗಳು ಮಾನಹಾನಿ ಉಂಟುಮಾಡಲು ನಡೆಸಿರುವ ಪಿತೂರಿ’ ಎಂದಿದ್ದಾರೆ.

‘ರಕ್ತದಾನ ಮಾಡುವ ಉದ್ದೇಶದಿಂದಲೇ ರಕ್ತದಾನ ಶಿಬಿರಕ್ಕೆ ಹೋಗಿದ್ದೆ. ಆದರೆ ವೈದ್ಯರು ಮಧುಮೇಹವಿರುವ ಕಾರಣ ರಕ್ತದಾನ ಮಾಡುವಂತಿಲ್ಲ ಎಂದರು’ ಎಂದು ಸ್ಪಷ್ಟನೆ ನೀಡಿದ್ದಾರೆ. 

‘ರಕ್ತದಾನ ಮಾಡುವ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ್ದೇವೆ’ ಎಂದು ಹೇಳುವ ವಿಡಿಯೊವೊಂದನ್ನು ವಿನೋದ್ ಅಗರ್ವಾಲ್‌  ‘ಎಕ್ಸ್‌’ ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.