ನವದೆಹಲಿ: ತುಕ್ಡೇ ತುಕ್ಡೇ ಮನಸ್ಥಿತಿಯಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿಲ್ಲ. ರಾಷ್ಟ್ರೀಯತೆಯ ದೃಷ್ಟಿಕೋನದಿಂದಲೇ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.
ಈ ಸಂಕಲ್ಪ ಪತ್ರನೈಜತೆಯಿಂದ ಕೂಡಿದೆ ಎಂದು ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಜೇಟ್ಲಿ ಹೇಳಿದ್ದಾರೆ.
ನಮ್ಮ ಹೊಸ ನೀತಿ, ಭಯೋತ್ಪಾದನೆ ವಿರುದ್ಧ ತೆಗೆದುಕೊಂಡ ಕ್ರಮಗಳನ್ನ ಜಗತ್ತೇ ಅಂಗೀಕರಿಸಿದೆ.ಜಮ್ಮು ಕಾಶ್ಮೀರದ ಜನರಿಗೆ ವಿಶೇಷ ಹಕ್ಕು-ಸೌಲಭ್ಯಗಳನ್ನು ನೀಡುವ ಆರ್ಟಿಕಲ್ 35Aಯನ್ನು ಅಧಿಕೃತವಾಗಿತೆಗೆದು ಹಾಕಲು ನಾನು ಬದ್ಧರಾಗಿದ್ದೇವೆ.35 ಎ ಪರಿಚ್ಛೇದವು ಜಮ್ಮು ಕಾಶ್ಮೀರದಲ್ಲಿರುವ ಕಾಯಂ ಅಲ್ಲದ ನಿವಾಸಿಗಳಿಗೆ ತಾರತಮ್ಯ ಮಾಡುತ್ತದೆ. ಕಳೆದ ಸರ್ಕಾರಗಳಿಗೆ ಒಂದೇ ಒಂದು ಘೋಷಣೆ ಇತ್ತು.ಆದರೆ ಮೋದಿ ನೇತೃತ್ವದ ಸರ್ಕಾರವು ಬಡವರಿಗೆ ಸಂಪನ್ಮೂಲಗಳನ್ನು ನೀಡಿದೆ. ಮುಂದಿನ 5 ವರ್ಷಗಳಲ್ಲಿ ಬಡತನವನ್ನು ಒಂದಂಕಿಗೆ ಇಳಿಸಿ ಆಮೇಲೆ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶ ಈ ಪ್ರಣಾಳಿಕೆಯಲ್ಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.