ಭುವನೇಶ್ವರ್: ಬಿಜೆಪಿ ಶಾಸಕ ಸುಭಾಶ್ ಪನಿಗ್ರಾಹಿ ಅವರು ಒಡಿಶಾ ವಿಧಾನಸಭೆಯಲ್ಲಿ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.
ರಾಜ್ಯದಲ್ಲಿ ಭತ್ತ ಸಂಗ್ರಹಣೆಗೆಸಂಬಂಧಿಸಿದ ಸಮಸ್ಯೆಗಳತ್ತ ಗಮನ ಸೆಳೆಯುವ ಸಲುವಾಗಿವಿಧಾನಸಭೆ ಅಧಿವೇಶನದ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಶಾಸಕರೇ ಹೇಳಿಕೊಂಡಿದ್ದಾರೆ.
ʼಡೇಬ್‌ಗಬ್ ಪ್ರದೇಶದಲ್ಲಿ ಭತ್ತದ ಸಂಗ್ರಹಣೆ ನಡೆಯುತ್ತಿಲ್ಲ. 2 ಲಕ್ಷ ಕ್ವಿಂಟಾಲ್‌ನಷ್ಟು ಭತ್ತ ಮಾರಾಟವಾಗದೇ ಬಿದ್ದಿದೆ. ಈ ವಿಚಾರದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಸ್ಯಾನಿಟೈಸರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದೆʼ ಎಂದು ಪನಿಗ್ರಾಹಿ ಅವರು ಅಧಿವೇಶನದ ಬಳಿಕತಿಳಿಸಿದ್ದಾರೆ.
ಒಡಿಶಾ ವಿಧಾನಸಭೆಯಲ್ಲಿ ಫೆಬ್ರುವರಿ 18 ರಂದು ಬಜೆಟ್ ಅಧಿವೇಶನ ಆರಂಭವಾಗಿದ್ದು, ಎರಡು ಹಂತಗಳಲ್ಲಿ ಏಪ್ರಿಲ್ 9ರ ವರೆಗೆ ನಡೆಯಲಿದೆ. ಫೆಬ್ರುವರಿ 22 ರಂದು ಬಜೆಟ್ ಮಂಡನೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.