ADVERTISEMENT

1989ರಲ್ಲಿ ಕಾಂಗ್ರೆಸ್‌ 63 ಸಂಸದರನ್ನು ಅಮಾನತು ಮಾಡಿತ್ತು: ಸಂಸದ ಅಹ್ಲುವಾಲಿಯಾ

ಪಿಟಿಐ
Published 20 ಡಿಸೆಂಬರ್ 2023, 15:08 IST
Last Updated 20 ಡಿಸೆಂಬರ್ 2023, 15:08 IST
<div class="paragraphs"><p> ದೇಶದ ಹಳೆಯ ಸಂಸತ್‌ ಭವನದ ಕಟ್ಟಡ</p><p><br></p></div>

ದೇಶದ ಹಳೆಯ ಸಂಸತ್‌ ಭವನದ ಕಟ್ಟಡ


   

ನವದೆಹಲಿ: ಸಂಸತ್‌ನಲ್ಲಿ 143 ಸಂಸದರನ್ನು ಅಮಾನತುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಪ್ರತಿಭಟನೆಯನ್ನು ಟೀಕಿಸಿರುವ ಬಿಜೆಪಿ ಸಂಸದ ಎಸ್.ಎಸ್.ಅಹ್ಲುವಾಲಿಯಾ ಅವರು ಕಾಂಗ್ರೆಸ್‌ ಪಕ್ಷ 1987ರಲ್ಲಿ 63 ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡಿರಲಿಲ್ಲವೆ ಎಂದು ಅವರು ಪ್ರಶ್ನಿಸಿದ್ದಾರೆ. 

ADVERTISEMENT

ಸಂಸತ್‌ ಭದ್ರತಾ ಲೋಪವನ್ನು ಕಾಂಗ್ರೆಸ್‌ ಪಕ್ಷ ಸರ್ಕಾರವನ್ನು ಗುರಿಯಾಗಿಸಿಕೊಂಡು ಇದೊಂದು ಗಂಭೀರ ವಿಷಯ ಎಂದು ಕರೆದಿದೆ. ಆದರೆ ಪ್ರಧಾನಿ ಹತ್ಯೆಗಿಂತ ದೊಡ್ಡ ಭದ್ರತಾ ಲೋಪ ಯಾವುದು? ಎಂದು ಅವರು ಪ್ರಶ್ನೆ ಮಾಡಿದ್ದಾರೆ. 

1989ರಲ್ಲಿ ಠಕ್ಕರ್ ಆಯೋಗದ ವರದಿಯನ್ನು ಮಂಡಿಸುವ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷ 63 ವಿರೋಧ ಪಕ್ಷಗಳ ಸಂಸದರನ್ನು ಅಮಾನತು ಮಾಡಿತ್ತು ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.