ADVERTISEMENT

ಗುಂಡಿಗೆ ಬಲಿಯಾದ ಪಕ್ಷದ ಕಾರ್ಯಕರ್ತನ ಅಂತ್ಯ ಸಂಸ್ಕಾರದಲ್ಲಿ ಸ್ಮೃತಿ ಇರಾನಿ ಭಾಗಿ

​ಪ್ರಜಾವಾಣಿ ವಾರ್ತೆ
Published 26 ಮೇ 2019, 14:32 IST
Last Updated 26 ಮೇ 2019, 14:32 IST
   

ಲಖನೌ: ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿಗಾಗಿ ಪ್ರಚಾರ ನಡೆಸಿದ್ದ ಬಿಜೆಪಿ ಕಾರ್ಯಕರ್ತ ಸುರೇಂದ್ರ ಸಿಂಗ್ ಶನಿವಾರ ಹತ್ಯೆಯಾಗಿದ್ದಾರೆ. ಪಕ್ಷದಕಾರ್ಯಕರ್ತನ ಮರಣ ವಾರ್ತೆ ಕೇಳಿ ಧಾವಿಸಿದ ಅಮೇಠಿ ಸಂಸದೆಸ್ಮತಿ ಇರಾನಿ ಸುರೇಂದ್ರ ಸಿಂಗ್ ಅವರ ಅಂತ್ಯ ಸಂಸ್ಕಾರದಲ್ಲಿಯೂ ಭಾಗಿಯಾಗಿದ್ದಾರೆ. ಸಿಂಗ್ ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ ಸ್ಮೃತಿ ಚಟ್ಟಕ್ಕೂ ಹೆಗಲು ಕೊಟ್ಟಿದ್ದಾರೆ.

ಅಮೇಠಿಯಲ್ಲಿ ಸ್ಮೃತಿ ಇರಾನಿಯವರ ಚುನಾವಣಾ ಪ್ರಚಾರದಲ್ಲಿ ಸಿಂಗ್ ಸಕ್ರಿಯವಾಗಿ ಕಾರ್ಯವೆಸಗಿದ್ದರು.

ಶನಿವಾರ ತಡರಾತ್ರಿ ಬರೌಲಿಯಾ ಗ್ರಾಮದಲ್ಲಿ ಸುರೇಂದ್ರ ಸಿಂಗ್ ಹತ್ಯೆ ನಡೆದಿದೆ. ಸುರೇಂದ್ರ ಸಿಂಗ್‌ ನಿವಾಸಕ್ಕೆ ಬಂದಿದ್ದ ದುಷ್ಕರ್ಮಿಗಳು ಮೂರು ಸುತ್ತು ಗುಂಡು ಹಾರಿಸಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ADVERTISEMENT

ಮೊಟಾರ್‌ ಬೈಕಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಸುರೇಂದ್ರ ಸಿಂಗ್‌ ಅವರ ಮನೆಯ ಬಾಗಿಲನ್ನು ತಟ್ಟಿದ್ದಾರೆ. ಮಲಗಿದ್ದ ಸುರೇಂದ್ರ ಸಿಂಗ್‌ ಬಾಗಿಲು ತೆರೆದು ಹೊರ ಬಂದಿದ್ದಾರೆ. ಕೂಡಲೇ ದುಷ್ಕರ್ಮಿಗಳು ಗುಂಡು ಹೊಡೆದಿದ್ದಾರೆ. ಸುರೇಂದ್ರ ಸಿಂಗ್‌ ದೇಹದಲ್ಲಿ ಮೂರು ಗುಂಡುಗಳು ಹೊಕ್ಕಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.