ADVERTISEMENT

Video| ಬಾಲಕಿಯರ ಶಾಲೆಯ ಶೌಚಾಲಯವನ್ನು ಬರಿಗೈಲೇ ಉಜ್ಜಿ ತೊಳೆದ ಬಿಜೆಪಿ ಸಂಸದ 

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 12:30 IST
Last Updated 23 ಸೆಪ್ಟೆಂಬರ್ 2022, 12:30 IST
   

ರೇವಾ: ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ಅವರು ಇತ್ತೀಚೆಗೆ ಮಧ್ಯಪ್ರದೇಶದ ರೇವಾ ಎಂಬಲ್ಲಿ ಬಾಲಕಿಯರ ಶಾಲೆಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸಿರುವ ವಿಡಿಯೊ ವೈರಲ್‌ ಆಗಿದೆ.

ರೇವಾ ಸಂಸದ ಮಿಶ್ರಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಅವರು ಯಾವುದೇ ಸಲಕರಣೆಗಳನ್ನು ಬಳಸದೇ ಬರಿ ಕೈಯಿಂದ ಶೌಚಾಲಯವನ್ನು ಉಜ್ಜಿ ಶುಚಿಗೊಳಿಸಿರುವುದು ದಾಖಲಾಗಿದೆ.

ಬಿಜೆಪಿಯ ‘ಸೇವಾ ಪಖವಾಡ’ ಕಾರ್ಯಕ್ರಮದಡಿಯಲ್ಲಿ ಯುವ ಮೋರ್ಚಾ ವತಿಯಿಂದ ಖತ್ಖಾರಿ ಗ್ರಾಮದ ಶಾಲೆಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿದೆ ಎಂದು ಮಿಶ್ರಾ ತಮ್ಮ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಪತ್ರಕರ್ತರೊಬ್ಬರು, ‘ಸಂಸದರು, ನೀವು ನಿಜಕ್ಕೂ ಸ್ವಚ್ಛತೆಗೆ ಮನಸ್ಸು ಮಾಡಿದ್ದರೆ ಬ್ರಶ್ ಬಳಸುತ್ತಿದ್ದರು. ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ. ಇದರ ಅರ್ಥವೇನು? ಇದನ್ನೇ ಮಕ್ಕಳಿಗೂ ಕಲಿಸುತ್ತೀರಾ? ಸ್ವಚ್ಛತೆಯನ್ನೂ ಸ್ವಚ್ಛವಾಗಿ ಮಾಡಬೇಕು! ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.