ADVERTISEMENT

LS ಚುನಾವಣೆಯಲ್ಲಿ ಗೆಲುವು ಪ್ರಶ್ನಿಸಿ ಶಿವಸೇನಾ ಅರ್ಜಿ; BJP ಸಂಸದ ರಾಣೆಗೆ ಸಮನ್ಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಆಗಸ್ಟ್ 2024, 6:42 IST
Last Updated 16 ಆಗಸ್ಟ್ 2024, 6:42 IST
<div class="paragraphs"><p>ಬಾಂಬೆ ಹೈಕೋರ್ಟ್ </p></div>

ಬಾಂಬೆ ಹೈಕೋರ್ಟ್

   

-ಪಿಟಿಐ ಚಿತ್ರ

ಮಹಾರಾಷ್ಟ್ರ: ರತ್ನಗಿರಿ–ಸಿಂಧುದುರ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ನಾರಾಯಣ ರಾಣೆ ಅವರು ಗೆಲುವು ಸಾಧಿಸಿದ್ದು ಪ್ರಶ್ನಿಸಿ ಶಿವಸೇನಾ (ಯುಬಿಟಿ) ಅಭ್ಯರ್ಥಿ ವಿನಾಯಕ್ ರಾವುತ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ರಾಣೆಗೆ ಸಮನ್ಸ್ ಜಾರಿ ಮಾಡಿದೆ.

ADVERTISEMENT

ಲೋಕಸಭೆ ಚುನಾವಣೆಯಲ್ಲಿ ನಾರಾಯಣ ರಾಣೆ ಅವರು ಭ್ರಷ್ಟ ಮತ್ತು ಅಕ್ರಮ ಮಾರ್ಗಗಳನ್ನು ಅನುಸರಿಸಿ ಗೆಲುವು ಸಾಧಿಸಿದ್ದಾರೆ. ಹಾಗಾಗಿ ರಾಣೆ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಬೇಕು ಮತ್ತು ಮರು ಮತದಾನ ನಡೆಸುವಂತೆ ಆದೇಶಿಸಬೇಕು ಎಂದು ಕೋರಿ ವಿನಾಯಕ್ ರಾವುತ್‌ ಕೋರ್ಟ್‌ ಮೆಟ್ಟಿಲೇರಿದ್ದರು.

ಕೇಂದ್ರ ಸಚಿವರಾಗಿದ್ದ ರಾಣೆ ಅವರು ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರಿಗೆ ಆಪ್ತರಾಗಿರುವ ವಿನಾಯಕ್ ರಾವುತ್‌ ಅವರನ್ನು ಸೋಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.