ಕೋಲ್ಕತ್ತ: ಕಾಳಿ ಮಾತೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಿಜೆಪಿ ಟೀಕೆಗೆ ಗುರಿಯಾಗಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ, ‘ಹಿಂದೂ ದೇವತೆಗಳು ಕೇಸರಿ ಪಕ್ಷದ ಸುಪರ್ದಿಯಲ್ಲಿ ಇಲ್ಲ, ಬಂಗಾಳದ ಜನರಿಗೆ ಅವರು ಕಾಳಿ ಮಾತೆ ಆರಾಧನೆಯ ಪಾಠ ಹೇಳುವ ಅಗತ್ಯವಿಲ್ಲ’ ಎಂದು ತಿರುಗೇಟು ನೀಡಿದ್ದಾರೆ.
ಮೊಯಿತ್ರಾ ಅವರು ಗುರುವಾರ ರಾತ್ರಿ ಬಂಗಾಳಿ ಸುದ್ದಿ ವಾಹಿನಿ ಜತೆ ಮಾತನಾಡಿ, ಹಿಂದುತ್ವದ ಅಜೆಂಡಾ ಹೇರುವುದು ಬಿಜೆಪಿ ಪ್ರಯತ್ನವಾಗಿದೆ. ಈ ವಿಷಯದ ಬಗ್ಗೆ ಮಾತನಾಡುವ ಮೂಲಕ ತಾವು ಪ್ರಬುದ್ಧ ರಾಜಕಾರಣಿಯಾಗಿ ವರ್ತಿಸಿರುವುದಾಗಿ ಹೇಳಿದರು.
ಕಳೆದ 2,000 ವರ್ಷಗಳಿಂದ ದೇಶದ ಇತರ ಭಾಗಗಳಲ್ಲಿ ವಿಭಿನ್ನ ಆಚರಣೆಗಳು ಚಾಲ್ತಿಯಲ್ಲಿವೆ. ಉತ್ತರ ಭಾರತದಲ್ಲಿ ದೇವತೆಗಳನ್ನು ಪೂಜಿಸುವ ವಿಧಾನಗಳ ಆಧಾರದ ಮೇಲೆ ಬಿಜೆಪಿ ತನ್ನ ಅಭಿಪ್ರಾಯಗಳನ್ನು ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಭಗವಾನ್ ರಾಮ ಅಥವಾ ಹನುಮಾನ್ ಕೇವಲ ಬಿಜೆಪಿಗೆ ಸೇರಿದವರಲ್ಲ. ಪಕ್ಷವು ಹಿಂದೂ ಧರ್ಮದ ಗುತ್ತಿಗೆ ತೆಗೆದುಕೊಂಡಿದೆಯೇ? ಎಂದು ಕೇಳಿದ್ದಾರೆ.
ಇವನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.