ನವದೆಹಲಿ: ಬಿಜೆಪಿಸಂಸದೀಯ ಪಕ್ಷದ ಸಭೆ ಜುಲೈ 2ರಂದು ನಡೆಯಲಿದೆ. ಸಂಸತ್ತಿನ ಅಧಿವೇಶನದ ಸಂದರ್ಭದಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಸುಮಾರು 380 ಸಂಸದರಿಗೆ ಅವರ ಜವಾಬ್ದಾರಿ, ಜಾರಿಗೊಳಿಸಬೇಕಾದ ಕಾರ್ಯಸೂಚಿಯನ್ನು ವಿವರಿಸುವ ಸಂಭವವಿದೆ.
ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ,ಪ್ರಸ್ತುತ ನಡೆಯುತ್ತಿರುವ ಅಧಿವೇಶನದಲ್ಲಿ ತನ್ನ ಮೊದಲ ಬಜೆಟ್ ಅನ್ನು ಮಂಡಿಸಲಿದೆ.
ಜೊತೆಗೆ ಹಲವು ಮಸೂದೆಗಳಿಗೆ ಅನುಮೋದನೆ ಪಡೆಯುವ ನಿರೀಕ್ಷೆಯನ್ನೂ ಹೊಂದಿದೆ. ಮೇ ತಿಂಗಳಲ್ಲಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕೈಗೊಂಡಿರುವ ತೀರ್ಮಾನಗಳನ್ನು ಕುರಿತು ಮೋದಿ ಅವರು ಸಭೆಯಲ್ಲಿ ಮಾತನಾಡಬಹುದು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.