ADVERTISEMENT

ಮೋದಿ ಸೇನೆ ಕಳಿಸಿದ್ದರಿಂದ ಚೀನಾ ಲಡಾಖ್‌ನಿಂದ ಹಿಮ್ಮೆಟ್ಟಿತು: ಜೆ.ಪಿ. ನಡ್ಡಾ

ಡೆಕ್ಕನ್ ಹೆರಾಲ್ಡ್
Published 22 ಆಗಸ್ಟ್ 2021, 2:32 IST
Last Updated 22 ಆಗಸ್ಟ್ 2021, 2:32 IST
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ
ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಂಪೂರ್ಣ ಸೇನೆಯನ್ನು ಗಡಿಗೆ ಕಳುಹಿಸಿದ್ದರಿಂದ ಕಳೆದ ವರ್ಷ ಪೂರ್ವ ಲಡಾಖ್‌ನಿಂದ ಚೀನಾ ಹೆಜ್ಜೆ ಹಿಂದೆ ಹಾಕಿತು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ಎರಡು ದಿನಗಳ ಭೇಟಿ ಸಲುವಾಗಿ ಉತ್ತರಾಖಂಡಕ್ಕೆ ಆಗಮಿಸಿರುವ ನಡ್ಡಾ, ರಾಯ್‌ವಾಲಾದಲ್ಲಿ ನಡೆದ ʼಸೈನಿಕ ಸಮ್ಮಾನ್‌ ಕಾರ್ಯಕ್ರಮದಲ್ಲಿ, ಭಾರತೀಯ ಸೇನೆಯ ಯೋಧರನ್ನುದ್ದೇಶಿಸಿ ಮಾತನಾಡಿದರು. 2014ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಗಡಿಯಲ್ಲಿ ಶತ್ರು ರಾಷ್ಟ್ರಗಳು ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ನೇರವಾಗಿ ಸಮರ್ಥ ಪ್ರತಿಕ್ರಿಯೆ ನೀಡಲು ಸಶಸ್ತ್ರ ಪಡೆಗೆ ನಿರ್ದೇಶಿಸಲಾಗಿದೆ ಎಂದರು.

ಮೊದಲಾಗಿದ್ದರೆ 'ಅಭಿ ರುಕೋ, ಸಂದೇಶ್‌ ಕಾ ಇಂತಿಜಾರ್‌ ಕರೋ' (ಈಗಲ್ಲ, ಆದೇಶ ಬಂದ ಬಳಿಕ) ಎಂಬಂತಿತ್ತು. ಆದರೆ ಮೋದಿ ಗಡಿಯಲ್ಲಿ ಯಾರೇ ಸುಳಿದರೂ ಸಮರ್ಥವಾಗಿ ಪ್ರತಿಕ್ರಿಯೆ ತೋರಿಸಲು ಸೇನೆಗೆ ಅವಕಾಶ ನೀಡಿದ್ದಾರೆ ಎಂದು ನಡ್ಡಾ ತಿಳಿಸಿದರು.

ADVERTISEMENT

ನಾವೆಷ್ಟು ಚೀನಾ ಬಗ್ಗೆ ಕೇಳಿದ್ದೇವೆ. ಆದರೆ, ಚೀನಾ ಎದುರಾದಾಗ, ಮೋದಿ ಸಂಪೂರ್ಣ ಸೇನೆಯನ್ನು ಗಡಿಗೆ ಕಳುಹಿಸಿದರು ಮತ್ತು ಹೆಜ್ಜೆ ಹಿಂದಿಡುವಂತೆ ಮಾಡಿದರು. ಜನರು ಭಾರತೀಯ ಸೇನೆಯ ಬಗ್ಗೆ ಹೆಚ್ಚು ಮಾತನಾಡಿದರು. ಆದರೆ ಸಶಸ್ತ್ರ ಪಡೆಗಳಿಗೆ ಎದುರಾಗಿ ನಿಲ್ಲುವಂತೆ ಸಂದೇಶ ನೀಡಿದ್ದು ನರೇಂದ್ರ ಮೋದಿ ಎಂದು ಜೆ.ಪಿ.ನಡ್ಡಾ ಹೇಳಿದರು.

ಎಲ್ಲರು ದೀಪಾವಳಿಯನ್ನುಅವರವರ ಮನೆಯಲ್ಲಿ ಆಚರಿಸುತ್ತಾರೆ. ಆದರೆ, ನರೇಂದ್ರ ಮೋದಿ ಅವರು ಗಡಿಯಲ್ಲಿ ಸೈನಿಕರ ಜೊತೆ ದೀಪಾವಳಿ ಹಬ್ಬ ಆಚರಿಸುತ್ತಾರೆ. ಇದು ಕೇವಲ ಸೈನಿಕರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವಲ್ಲ. ಇಡೀ ಭಾರತಕ್ಕೆ ನೀಡುವ ಸಂದೇಶ. ಗಡಿಯಲ್ಲಿ ಸೈನಿಕರು ಸದೃಢವಾಗಿ ನಿಂತಿರುವುದರಿಂದ ನಾವೆಲ್ಲರು ದೀಪಾವಳಿಯನ್ನು ಮನೆಯಲ್ಲಿ ಆಚರಿಸುತ್ತಿದ್ದೇವೆ ಎಂದು ಜೆ.ಪಿ.ನಡ್ಡಾ ಪಿಎಂ ಮೋದಿ ಅವರನ್ನು ಶ್ಲಾಘಿಸಿದರು.

ಮುಂದಿನ ವರ್ಷ ಉತ್ತರಾಖಂಡದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.