ADVERTISEMENT

ಕೋವಿಶೀಲ್ಡ್ ಅಡ್ಡಪರಿಣಾಮ: ದೇಣಿಗೆಗಾಗಿ ಜನರ ಜೀವ ಅಡವಿಟ್ಟ BJP – ಅಖಿಲೇಶ್ ಯಾದವ್

ಪಿಟಿಐ
Published 1 ಮೇ 2024, 5:46 IST
Last Updated 1 ಮೇ 2024, 5:46 IST
<div class="paragraphs"><p>ಎಸ್‌ಪಿ ನಾಯಕ ಅಖಿಲೇಶ್ ಯಾದವ್</p></div>

ಎಸ್‌ಪಿ ನಾಯಕ ಅಖಿಲೇಶ್ ಯಾದವ್

   

ಲಖನೌ: ಕೋವಿಶಿಲ್ಡ್ ಲಸಿಕೆಯ ಅಡ್ಡಪರಿಣಾಮದ ಬಗ್ಗೆ ಉಂಟಾಗಿರುವ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ‘ಲಸಿಕೆ ತಯಾರಿಕಾ ಕಂಪನಿಗಳಿಂದ ರಾಜಕೀಯ ದೇಣಿಗೆ ಪಡೆಯಲು ಬಿಜೆಪಿ ಜನರ ಜೀವವನ್ನೇ ಅಡವಿಟ್ಟಿತು’ ಎಂದು ಕಿಡಿಕಾರಿದ್ದಾರೆ.

‌‌‌ಈ ಬಗ್ಗೆ ಉನ್ನತ ಮಟ್ಟದ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿರುವ ಅವರು, ಇಂಥ ಮಾರಕ ಔಷಧಗಳಿಗೆ ಅನುಮತಿ ನೀಡುವ ಮೂಲಕ ಕೊಲೆ ಸಂಚು ಹೂಡಲಾಗಿದೆ. ಇದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಸುಮಾರು 80 ಕೋಟಿ ಭಾರತೀಯರಿಗೆ ಕೋವಿಶಿಲ್ಡ್ ಲಸಿಕೆ ನೀಡಲಾಗಿದೆ. ಪ್ರತಿಯೊಬ್ಬರಿಗೆ 2 ಡೋಸ್‌ ನೀಡಲಾಗಿದೆ. ಲಸಿಕೆಯಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ತಯಾರಕ ಕಂಪನಿ ಹೇಳಿದೆ. ಲಸಿಕೆಯ ಅಡ್ಡಪರಿಣಾಮದಿಂದಾಗಿ ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಹಾಗೂ ಲಸಿಕೆಯ ದುಷ್ಪರಿಣಾಮಗಳ ಬಗ್ಗೆ ಭಯ ವ್ಯಕ್ತಪಡಿಸಿದವರ ಅನುಮಾನಗಳು ಮತ್ತು ಭಯಗಳು ಈಗ ನಿಜ ಎಂದು ಸಾಬೀತಾಗಿದೆ’ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಜೀವದ ಜೊತೆ ಆಟವಾಡಿದರನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.