ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ಮತ್ತೆ 6 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಈ ಮೂಲಕ 166 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಬಿಜೆಪಿ ಘೋಷಿಸಿದಂತಾಗಿದೆ.
ಒಟ್ಟು 182 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 9 ರಂದು 160 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿತ್ತು.
ಎರಡನೇ ಲಿಸ್ಟ್ ಪ್ರಕಾರ ಭಾವನಗರ್ಪೂರ್ವ ಕ್ಷೇತ್ರದಿಂದ ಸೇಜಲ್ ಪಾಂಡ್ಯಾ, ದೋರಾಜಿ ಕ್ಷೇತ್ರದಿಂದ ಮಾಜಿ ವಿಸಿ ಮಹೇಂದ್ರ ಪಡಾಲಿಯಾ, ಕಂಬಾಲಿಯಾದಿಂದ ಮುಳು ಬೆರಾ ಅವರನ್ನು ಕುತಿಯಾನ್‌ದಿಂದ ದಿಲೀಬೆನ್ ಒಡೆದ್ರಾ ಅವರನ್ನು , ಚೋರಾಸಿಯಿಂದ ಸಂದೀಪ್ ದೇಸಾಯಿ ಅವರನ್ನು ಹಾಗೂ ದೇಡಿಯಾಪಡ್‌ದಿಂದ (ಎಸ್‌ಟಿ) ಹಿತೇಶ್ ವಾಸವ್ ಅವರನ್ನು ಕಣಕ್ಕೆ ಇಳಿಸಲಾಗಿದೆ.
ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 160 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವೆಂಬರ್ 9 ರಂದು ಬಿಡುಗಡೆ ಮಾಡಿತ್ತು.38 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದತ್ತು. ಇವರಲ್ಲಿ ಐವರು ಸಚಿವರು ಮತ್ತು ಸೇತುವೆ ಕುಸಿತದ ದುರಂತ ಸಂಭವಿಸಿದ ಮೊರ್ಬಿ ಶಾಸಕ ಕಿರಣ್ ಪಟೇಲ್ ಸೇರಿದ್ದರು.
2012 ಮತ್ತು 2017ರಲ್ಲಿ ಭುಜ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ಗುಜರಾತ್ ವಿಧಾನಸಭೆ ಸ್ಪೀಕರ್ ನಿಂಬಾಬೆನ್ ಆಚಾರ್ಯ ಅವರಿಗೂ ಈ ಬಾರಿ ಟಿಕೆಟ್ ನಿರಾಕರಿಸಲಾಗಿದೆ.ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾಣಿ ಮತ್ತು ಅವರ ಸಂಪುಟದಲ್ಲಿ ಶಾಸಕರಾಗಿದ್ದ ಏಳು ಶಾಸಕರಿಗೂ ಟಿಕೆಟ್ ನೀಡಿಲ್ಲ.
ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ರಂದು ಮೊದಲ ಹಂತದ ಮತದಾನ, ಡಿ.5 ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಡಿ.8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.