ADVERTISEMENT

ನೋಟಾ ಆಯ್ಕೆಗೆ ಪ್ರಚೋದನೆ ಪ್ರಜಾಪ್ರಭುತ್ವದ ಮೇಲಿನ ದಾಳಿ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 9 ಮೇ 2024, 15:14 IST
Last Updated 9 ಮೇ 2024, 15:14 IST
.
.   

ಇಂದೋರ್‌: ನೋಟಾ ಆಯ್ಕೆ ಮಾಡಿ ಎಂದು ಇಂದೋರ್ ಲೋಕಸಭಾ ಕ್ಷೇತ್ರದ ಮತದಾರರಿಗೆ ಕಾಂಗ್ರೆಸ್‌ ಕರೆ ನೀಡಿರುವುದು ಪ್ರಜಾಪ್ರಭುತ್ವದ ಮೇಲಿನ ದಾಳಿ ಎಂದು ಮಧ್ಯಪ್ರದೇಶದ ಬಿಜೆಪಿ ಆರೋಪಿಸಿದೆ.

ನೋಟಾ ಆಯ್ಕೆ ಮಾಡಿ ಎಂಬ ಬರಹವಿದ್ದ ಪೋಸ್ಟರ್‌ಅನ್ನು ಪಾಲಿಕೆಯ ಬಿಜೆ‍ಪಿ ಸದಸ್ಯೆ ಸಂಧ್ಯಾ ಯಾದವ್‌ ಅವರು ಆಟೊವೊಂದರಿಂದ ತೆರವುಗೊಳಿಸಿದ್ದರು. ಈ ದೃಶ್ಯವಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಸಂಧ್ಯಾ ಯಾದವ್‌ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ ದೂರು ನೀಡಿದೆ.

ನೋಟಾ ಆಯ್ಕೆ ಮಾಡುವಂತೆ ಜನರಿಗೆ ಪ್ರಚೋದನೆ ನೀಡುವುದು ಪ್ರಜಾಪ್ರಭುತ್ವದಲ್ಲಿ ಅಪರಾಧ ಎಂದು ಬಿಜೆಪಿ ಮಧ್ಯಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ.ಶರ್ಮಾ ಅವರು ಹೇಳಿದರು.

ADVERTISEMENT

ಇಂದೋರ್‌ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ಏಪ್ರಿಲ್‌ 29 ರಂದು ನಾಮಪತ್ರವನ್ನು ವಾಪಸ್‌ ಪಡೆದುಕೊಂಡಿದ್ದರು. ಬಳಿಕ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

‘ನೋಟಾ ಆಯ್ಕೆ ಮಾಡಿ, ಬಿಜೆಪಿಗೆ ಪಾಠ ಕಲಿಸಿ’ ಎಂದು ಕಾಂಗ್ರೆಸ್‌ ಮುಖಂಡರು ಕ್ಷೇತ್ರದ ಜನರಿಗೆ ಕರೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.