ಮುಂಬೈ: ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ವಿಚಾರ ಬಿಜೆಪಿ ಮತ್ತು ಶಿವಸೇನೆ ನಡುವೆ ಭಿನ್ನಮತ ಸೃಷ್ಟಿಗೆ ಕಾರಣವಾಗಿದೆ. ಈ ನಡುವೆ ಎರಡೂ ಪಕ್ಷಗಳೂ ಸೋಮವಾರ ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಲಿವೆ. ಇದಕ್ಕಾಗಿ ಸಮಯವನ್ನೂ ಕೇಳಿವೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗಿಂತಲೂ ಕಡಿಮೆ ಸ್ಥಾನಗಳಲ್ಲಿ ಗೆದ್ದಿತ್ತು. ಕಳೆದ ಬಾರಿ ಒಂಟಿಯಾಗಿ ಸ್ಪರ್ಧಿಸಿ 120ಕ್ಕೂ ಹೆಚ್ಚು ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿ 105 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಯಿತು. ಅಲ್ಲದೇ, ಫಲಿತಾಂಶ ಬಂದ ಕೂಡಲೇ ಶಿವ ಸೇನೆ ಕೂಡ ಅಧಿಕಾರದ ಸಮಾನ ಹಂಚಿಕೆಗೆ ಪಟ್ಟು ಹಿಡಿದಿತ್ತು.
ಸದ್ಯ 50:50ರಂತೆ ಅಧಿಕಾರ ಹಂಚಿಕೆಯಾಗಬೇಕು ಎಂಬ ವಿಚಾರ ಮತ್ತು ಮುಖ್ಯಮಂತ್ರಿ ಸ್ಥಾನದ ಕುರಿತು ಚರ್ಚೆಗಳು ಬಿಜೆಪಿ ಮತ್ತು ಶಿವಸೇನೆ ನಡುವೆ ಮುನಿಸು ಸೃಷ್ಟಿ ಮಾಡಿವೆ.
ಈ ನಡುವೆ ಭಾನುವಾರ ಮಾತನಾಡಿರುವ ಎನ್‌ಡಿಎ ಮೈತ್ರಿ ಕೂಟದ ಮತ್ತೊಂದು ಮಿತ್ರ ಪಕ್ಷ ಆರ್‌ಪಿಐನ ಮುಖ್ಯಸ್ಥ ರಾಮದಾಸ ಅಟವಾಳೆ, ಶಿವಸೇನೆಯು ಉಪ ಮುಖ್ಯಮಂತ್ರಿ ಸ್ಥಾನವನ್ನು ಒಪ್ಪಿಕೊಳ್ಳಬೇಕು. ಆದಿತ್ಯ ಠಾಕ್ರೆ ಅವರನ್ನು ಡಿಸಿಎಂ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.