ನವದೆಹಲಿ: ಮುಂಬೈನಲ್ಲಿ ನಾಳೆ ವಿಪಕ್ಷಗಳ INDIA ಒಕ್ಕೂಟದ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಬಿಜೆಪಿ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯರನ್ನು ದಿ ಟರ್ಮಿನೇಟರ್ (The Terminator) ಸಿನಿಮಾಗೆ ಹೋಲಿಸಿ ಪೋಸ್ಟರ್ ಹಂಚಿಕೊಂಡಿದೆ.
ಪೋಸ್ಟರ್ ಮೇಲೆ ನರೇಂದ್ರ ಮೋದಿ ‘ದಿ ಟರ್ಮಿನೇಟರ್’ ’2024 ನಾನು ಪುನಃ ಬರುತ್ತೇನೆ’ ಎಂದು ಬರೆಯಲಾಗಿದ್ದು, ‘ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಬಹುದು ಎಂದು ಭಾವಿಸಿವೆ, ಕನಸು ಆರಂಭವಾಗಲಿ! ಟರ್ಮಿನೇಟರ್ ಯಾವಾಗಲೂ ಗೆಲ್ಲುತ್ತಾರೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಸದ್ಯ ಪೋಸ್ಟರ್ ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ.
2024ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ಮತ್ತು ಪ್ರತಿಪಕ್ಷಗಳ ಒಕ್ಕೂಟವು ತಂತ್ರಗಾರಿಕೆಯನ್ನು ಚುರುಕುಗೊಳಿಸಿವೆ. ಇದೇ ನಿಟ್ಟಿನಲ್ಲಿ INDIA ಒಕ್ಕೂಟ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1 ರಂದು ಮುಂಬೈನಲ್ಲಿ ಸಭೆ ನಡೆಸುತ್ತಿವೆ. ಈ ಸಭೆಯಲ್ಲಿ 26 ಪ್ರತಿಪಕ್ಷಗಳು ಭಾಗಿಯಾಗಲಿವೆ.
ಈ ನಡುವೆ ಮಹಾರಾಷ್ಟ್ರ ಬಿಜೆಪಿ ಕೂಡ ರಾಜ್ಯದ 48 ಲೋಕಸಭಾ ಸೀಟುಗಳಿಗೆ ಎರಡು ದಿನಗಳ ಪರಿಶೀಲನಾ ಸಭೆಯನ್ನು ಆಯೋಜಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.