ADVERTISEMENT

ಸಿಖ್ಖರ ಬಗ್ಗೆ ಹೇಳಿಕೆ | ಸುಳ್ಳು ಹರಡುತ್ತಿರುವ ಬಿಜೆಪಿ: ರಾಹುಲ್ ಗಾಂಧಿ

ಪಿಟಿಐ
Published 21 ಸೆಪ್ಟೆಂಬರ್ 2024, 13:55 IST
Last Updated 21 ಸೆಪ್ಟೆಂಬರ್ 2024, 13:55 IST
<div class="paragraphs"><p>ರಾಹುಲ್ ಗಾಂಧಿ&nbsp;&nbsp;</p></div>

ರಾಹುಲ್ ಗಾಂಧಿ  

   

ನವದೆಹಲಿ: ಇತ್ತೀಚಿನ ಅಮೆರಿಕ ಪ್ರವಾಸದ ವೇಳೆ ಸಿಖ್ಖರ ವಿಚಾರದಲ್ಲಿ ತಮ್ಮ ಹೇಳಿಕೆ ಕುರಿತು ಬಿಜೆಪಿ ಸುಳ್ಳು ಹರಡುತ್ತಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

'ನಾನು ಹೇಳಿರುವುದರಲ್ಲಿ ತಪ್ಪೇನಿದೆ? ಎಂದಿನಂತೆ ಸುಳ್ಳು ಹರಡುವ ಜಾಯಮಾನ ಬಿಜೆಪಿಯದ್ದಾಗಿದ್ದು, ನನ್ನ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ' ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಬರೆದುಕೊಂಡಿರುವ ರಾಹುಲ್ ಗಾಂಧಿ, 'ಅಮೆರಿಕದಲ್ಲಿ ನನ್ನ ಹೇಳಿಕೆ ಕುರಿತು ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದೆ. ನಾನು ಹೇಳಿದ್ದರಲ್ಲಿ ಏನಾದರೂ ತಪ್ಪು ಇದೆಯೇ ಎಂದು ದೇಶದ ಪ್ರತಿಯೊಬ್ಬ ಸಿಖ್ ಸಹೋದರ ಸಹೋದರಿಯರನ್ನು ಕೇಳಲು ಇಚ್ಛಿಸುತ್ತೇನೆ. ಯಾವುದೇ ಭಯವಿಲ್ಲದೆ ತಮ್ಮ ಧರ್ಮವನ್ನು ಮುಕ್ತವಾಗಿ ಅನುಸರಿಸಲು ಸಾಧ್ಯವಾಗುವ ದೇಶ ಭಾರತವಾಗಬೇಕಲ್ಲವೇ?' ಎಂದು ಕೇಳಿದ್ದಾರೆ.

'ಎಂದಿನಂತೆ ಬಿಜೆಪಿ ಸುಳ್ಳಿನ ಮೊರೆ ಹೋಗುವುದನ್ನು ಚಾಳಿ ಮಾಡಿಕೊಂಡಿದೆ. ಸತ್ಯವನ್ನು ಸಹಿಸದ ಬಿಜೆಪಿ, ಹತಾಶೆಯಿಂದ ನನ್ನ ಬಾಯಿಮುಚ್ಚಿಸಲು ಯತ್ನಿಸುತ್ತಿದೆ. ನಾನು ಎಂದಿಗೂ ಭಾರತವನ್ನು ವ್ಯಾಖ್ಯಾನಿಸುವ ವಿವಿಧತೆಯಲ್ಲಿ ಏಕತೆ, ಸಮಾನತೆ ಮತ್ತು ಪ್ರೀತಿಯ ಮೌಲ್ಯಗಳ ಪರ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅಮೆರಿಕ ಪ್ರವಾಸದ ವೇಳೆ, 'ಭಾರತದಲ್ಲಿ ಗುರುದ್ವಾರಗಳಿಗೆ ತೆರಳುವಾಗ ಸಿಖ್ಖರು ಟರ್ಬನ್ ಧರಿಸಲು ಅವಕಾಶ ನೀಡಲಾಗುತ್ತದೆಯೇ' ಎಂದು ಪ್ರಶ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.