ನವದೆಹಲಿ: ಅಬಕಾರಿ ನೀತಿಗೆ ಸಂಬಂಧಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮಗೆ ಪತ್ರ ಬರೆದಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಳಿ ಸಿಬಿಐಗೆ ಏನೂ ಸಿಕ್ಕಿಲ್ಲ. ಹೀಗಾಗಿ ಬಿಜೆಪಿ ಈಗ ಅಣ್ಣಾ ಹಜಾರೆ ಅವರನ್ನು ಬಳಸಿಕೊಳ್ಳುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಕಳೆದ ಒಂದು ವಾರದಿಂದ ರಾಜಕೀಯ ಒತ್ತಡದಲ್ಲಿದ್ದ ಸಿಬಿಐ ಮನೀಶ್ ಸಿಸೋಡಿಯಾ ಅವರಿಗೆ ಅನೌಪಚಾರಿಕ ಕ್ಲೀನ್‌ಚಿಟ್ ನೀಡಿದೆ. ಜನರು ಬಿಜೆಪಿಯನ್ನು ನಂಬುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್‌ಗೆ ಅಧಿಕಾರದ ಅಮಲೇರಿದೆ ಎಂದು ಅಣ್ಣಾ ಹಜಾರೆ ಟೀಕಿಸಿದ್ದರು.
ಅಬಕಾರಿ ನೀತಿ ಅಕ್ರಮದ ಆರೋಪಕ್ಕೆ ಸಂಬಂಧಿಸಿ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದ ಹಜಾರೆ, ‘ಸ್ವರಾಜ್’ ಪುಸ್ತಕದ ಸಾಲುಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದರು. ‘ಸ್ವರಾಜ್’ ಪುಸ್ತಕವನ್ನು ಕೇಜ್ರಿವಾಲ್ 2012ರಲ್ಲಿ ಬರೆದಿದ್ದರು.
‘ರಾಜಕೀಯ ಪ್ರವೇಶಿಸುವ ಮುನ್ನ ನೀವು ಸ್ವರಾಜ್ ಎಂಬ ಪುಸ್ತಕ ಬರೆದಿದ್ದಿರಿ. ಅದಕ್ಕೆ ನಾನು ಮುನ್ನುಡಿ ಬರೆದಿದ್ದೆ. ಆ ಪುಸ್ತಕದಲ್ಲಿ ಗ್ರಾಮ ಸಭೆ ಮತ್ತು ಮದ್ಯ ನೀತಿಯ ಬಗ್ಗೆ ಕೊಚ್ಚಿಕೊಂಡಿದ್ದಿರಿ. ನೀವು ಏನು ಬರೆದಿದ್ದಿರೋ ಅದನ್ನು ನಿಮಗೆ ನೆನಪಿಸುತ್ತಿದ್ದೇನೆ’ ಎಂದು ಕೇಜ್ರಿವಾಲ್ ಉದ್ದೇಶಿಸಿ ಹಜಾರೆ ಪತ್ರದಲ್ಲಿ ಬರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.