ADVERTISEMENT

ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರ್ಬಳಕೆ: ಆರ್‌ಜೆಡಿ ಆರೋಪ

ಪಿಟಿಐ
Published 9 ಮಾರ್ಚ್ 2024, 12:34 IST
Last Updated 9 ಮಾರ್ಚ್ 2024, 12:34 IST
<div class="paragraphs"><p>ರಿಷಿ ಮಿಶ್ರಾ</p></div>

ರಿಷಿ ಮಿಶ್ರಾ

   

ಪಟ್ನಾ: ಕೇಂದ್ರದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಸರ್ಕಾರವು ತನ್ನದೇ ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಂಬಿಕೆ ಕಳೆದುಕೊಂಡಿದೆ. ಇದೇ ಕಾರಣದಿಂದಾಗಿ ಎದುರಾಳಿಗಳನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಆರ್‌ಜೆಡಿ ಶನಿವಾರ ಆರೋಪಿಸಿದೆ. 

ಪಕ್ಷದ ವಕ್ತಾರ ರಿಷಿ ಮಿಶ್ರಾ, ‘ಕಾರ್ಯಕರ್ತರು, ನಾಯಕರಿಂದ ಮತಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಅರಿತಿರುವ ಬಿಜೆಪಿಯು ಇ.ಡಿ, ಸಿಬಿಐ ಮತ್ತು ಆದಾಯ–ತೆರಿಗೆ ಇಲಾಖೆಯನ್ನು ಛೂ ಬಿಡುತ್ತಿದೆ’ ಎಂದು ಹೇಳಿದರು.

ADVERTISEMENT

‘ತನಿಖಾ ಸಂಸ್ಥೆಗಳು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರೆ, ಹಣ ಅಕ್ರಮ ವರ್ಗಾವಣೆ ಆರೋಪ ಎದುರಿಸುತ್ತಿರುವ ಅಜಿತ್ ಪವಾರ್‌ ಅವರ ನಿವಾಸದಲ್ಲೂ ಶೋಧ ನಡೆಸಲಿ’ ಎಂದು ಸವಾಲು ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.