ADVERTISEMENT

ಬಿಜೆಪಿ ವೆಬ್‌ಸೈಟ್‌ ಹ್ಯಾಕ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 7:36 IST
Last Updated 5 ಮಾರ್ಚ್ 2019, 7:36 IST
   

ನವದೆಹಲಿ:ಭಾರತೀಯ ಜನತಾ ಪಾರ್ಟಿಯ(ಬಿಜೆಪಿ) ಅಧಿಕೃತ ವೆಬ್‌ಸೈಟ್‌ – http://www.bjp.org/ – ಮಂಗಳವಾರ ಹ್ಯಾಕ್‌ ಆಗಿದೆ ಎಂದು ಹೇಳಲಾಗಿದೆ.

ವೆಬ್‌ಸೈಟ್‌ ಹ್ಯಾಕ್‌ ಆದ ಬಳಿಕ ಸ್ಥಗಿತಗೊಂಡಿದೆ. ಯಾವುದೇ ಗುಂಪು ಹ್ಯಾಕ್‌ ಮಾಡಿರುವ ಹೊಣೆ ಹೊತ್ತಿಲ್ಲ.

ವೆಬ್‌ಸೈಟ್‌ ಹ್ಯಾಕ್‌ ಆಗಿರುವ ಸ್ಕ್ರೀನ್‌ಶಾಟ್‌ಗಳನ್ನು ಹಲವರು ಟ್ವೀಟ್ ಮಾಡಿದ್ದಾರೆ.

ADVERTISEMENT

ಟ್ವೀಟ್‌ ಮಾಡಿರುವ ಚಿತ್ರದ ಮೇಲ್ಭಾಗದಲ್ಲಿರುವ ದುರುದ್ದೇಶಪೂರಿತ ಸಂದೇಶದಲ್ಲಿ ‘ಪಕ್ಷಭಾರತೀಯ ನಾಗರಿಕರನ್ನು ಮೋಸಗೊಳಿಸುತ್ತಿದೆ’ ಎಂದು ಬರೆಯಲಾಗಿದೆ.

ನಂತರದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿಯ ಚಾನ್ಸಲರ್‌ ಏಂಜೆಲಾ ಮರ್ಕೆಲ್‌ ಅವರು ಇರುವ ಚಿತ್ರವಿದೆ. ಜತೆಗೆ, ಕ್ವೀನ್ಸ್‌ ಬೋಹೀಮಿಯನ್‌ ರಾಪ್ಸೋಡಿ – ಮಪೆಟ್ಸ್‌ ಆವೃತ್ತಿಯ ಯೂಟ್ಯೂಬ್‌ ಲಿಂಕ್ ಇದೆ.

ಈ ಸುದ್ದಿಯನ್ನು ಬರೆದ ಸಮಯಕ್ಕೆ ವೆಬ್‌ಸೈಟ್‌ಅನ್ನು ಪರಿಶೀಲಿಸಿದಾಗ ಪುಟ ತೆರೆದುಕೊಳ್ಳದೆ ಬಂದದ್ದು ಹೀಗೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.