ADVERTISEMENT

ಮೋದಿ ನೇತೃತ್ವದಲ್ಲಿ BJP ಟೈಟಾನಿಕ್ ರೀತಿ ಶಾಶ್ವತವಾಗಿ ಮುಳುಗಲಿದೆ: ಸುಬ್ರಮಣಿಯನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜುಲೈ 2024, 8:08 IST
Last Updated 15 ಜುಲೈ 2024, 8:08 IST
<div class="paragraphs"><p>ಸುಬ್ರಮಣಿಯನ್ ಸ್ವಾಮಿ ಹಾಗೂ ನರೇಂದ್ರ ಮೋದಿ</p></div>

ಸುಬ್ರಮಣಿಯನ್ ಸ್ವಾಮಿ ಹಾಗೂ ನರೇಂದ್ರ ಮೋದಿ

   

ಪಿಟಿಐ ಚಿತ್ರಗಳು

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್‌ ಹಡಗಿನಂತೆ ಮುಳುಗುತ್ತದೆ ಎಂದು ಅದೇ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ಸೋಮವಾರ ಭವಿಷ್ಯ ನುಡಿದಿದ್ದಾರೆ.

ADVERTISEMENT

ವಿವಿಧ ರಾಜ್ಯಗಳ ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಎಕ್ಸ್‌/ಟ್ವಿಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸ್ವಾಮಿ, 'ಬಿಜೆಪಿಯಲ್ಲಿರುವ ನಾವು ನಮ್ಮ ಪಕ್ಷ ಟೈಟಾನಿಕ್‌ ಹಡಗು ಮುಳುಗಿದಂತೆ ಮುಳುವುದನ್ನು ನೋಡಲು ಬಯಸುವುದಾದರೆ, ಅದರ ನೇತೃತ್ವವನ್ನು ಮೋದಿ ಅವರೇ ವಹಿಸುವುದು ಉತ್ತಮ. ಶಾಶ್ವತವಾಗಿ ಮುಳುಗಲಿರುವ ಬಿಜೆಪಿಯಲ್ಲಿ ಬಿರುಕು ಮೂಡಿದೆ ಎಂಬುದನ್ನು ಉಪ ಚುನಾವಣೆ ಫಲಿತಾಂಶ ತೋರಿಸುತ್ತಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.

7 ರಾಜ್ಯಗಳ 13 ವಿಧಾನಸಭೆ ಕ್ಷೇತ್ರಗಳಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆ ಫಲಿತಾಂಶ ಜುಲೈ 13ರಂದು ಪ್ರಕಟವಾಗಿದೆ.

ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ 10 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ 2 ಹಾಗೂ ಪಕ್ಷೇತರ ಅಭ್ಯರ್ಥಿ 1 ಕಡೆ ಗೆದ್ದಿದ್ದಾರೆ.

ಇಂಡಿಯಾ ಮೈತ್ರಿಕೂಟದಲ್ಲಿರುವ ಕಾಂಗ್ರೆಸ್‌ ಹಾಗೂ ಟಿಎಂಸಿ ತಲಾ 4 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಎಎಪಿ ಮತ್ತು ಡಿಎಂಕೆ ಒಂದೊಂದು ಕಡೆ ಜಯ ಗಳಿಸಿವೆ.

2024ರ ಲೋಕಸಭೆ ಚುನಾವಣೆಯಲ್ಲಿ ಅಯೋಧ್ಯೆಯಲ್ಲಿ ಸೋಲುಕಂಡಿದ್ದ ಬಿಜೆಪಿ, ಉಪ ಚುನಾವಣೆಯಲ್ಲಿ ಉತ್ತರಾಖಂಡದ ಬದರಿನಾಥದಲ್ಲಿ ಮುಗ್ಗರಿಸಿದೆ. ಇದರ ಬೆನ್ನಲ್ಲೇ, ಹಿಂದುತ್ವ ಪರ ಮತದಾರರು ಕೇಸರಿ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂಬ ಚರ್ಚೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾಮಿ ಅವರು ಸ್ವಪಕ್ಷದ ವಿರುದ್ಧವೇ ಟೀಕೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.