ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ದ್ವೇಷಪೂರಿತ ರಾಜಕಾರಣವು ದೇಶಕ್ಕೆ ಮಾರಕ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್‌ನಲ್ಲಿ ಬಿಜೆಪಿ ಸರ್ಕಾರದ ಅತಿ ದೊಡ್ಡ ಕುಂದು ಕೊರತೆ ಏನು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಲು 'ನಿರುದ್ಯೋಗ', 'ತೆರಿಗೆ ಸುಲಿಗೆ', 'ಬೆಲೆ ಏರಿಕೆ' ಮತ್ತು 'ದ್ವೇಷದ ವಾತಾವರಣ' ಎಂಬ ನಾಲ್ಕು ಆಯ್ಕೆಗಳನ್ನು ನೀಡಿದ್ದರು.
ಈ ಪೈಕಿ ಅತಿ ಹೆಚ್ಚು ಶೇ 35ರಷ್ಟು ಮಂದಿ ದ್ವೇಷದ ವಾತಾವರಣ ಎಂದು ಉತ್ತರಿಸಿದ್ದಾರೆ. ನಿರುದ್ಯೋಗ ಶೇ 28, ಬೆಲೆ ಏರಿಕೆ ಶೇ 19.8 ಹಾಗೂ ತೆರಿಗೆ ವಸೂಲಿ ಎಂದು ಶೇ 17.2 ಮಂದಿ ಪ್ರತಿಕ್ರಿಯಿಸಿದ್ದಾರೆ.
ಬಳಿಕ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, 'ಬಿಜೆಪಿಯ ದ್ವೇಷ ರಾಜಕಾರಣ ದೇಶಕ್ಕೆಬಹಳ ಅಪಾಯಕಾರಿ ಎಂದು ನಾನು ಕೂಡ ನಂಬುತ್ತೇನೆ. ಈ ದ್ವೇಷವು ನಿರುದ್ಯೋಗಕ್ಕೂ ಕಾರಣವಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸದಿದ್ದರೆ ದೇಶ ಹಾಗೂ ವಿದೇಶಿ ಕೈಗಾರಿಕೆಗಳು ನಡೆಯಲಾರವು. ಪ್ರತಿದಿನ ನಿಮ್ಮ ಸುತ್ತ ಬೆಳೆಯುತ್ತಿರುವ ಈ ದ್ವೇಷವನ್ನು ಸಹೋದರತ್ವದಿಂದ ಸೋಲಿಸಬಹುದು. ನೀವು ನನ್ನೊಂದಿಗೆ ಇದ್ದೀರಾ?' ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.