ADVERTISEMENT

ಸಚಿವ ಕೈಲಾಶ್ ಗೆಹಲೋತ್‌ ರಾಜೀನಾಮೆ ಬೆನ್ನಲ್ಲೇ ಎಎಪಿ ಸೇರಿದ BJP ಮಾಜಿ ಶಾಸಕ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2024, 11:34 IST
Last Updated 17 ನವೆಂಬರ್ 2024, 11:34 IST
<div class="paragraphs"><p>ಆಮ್ ಆದ್ಮಿ ಪಕ್ಷಕ್ಕೆ&nbsp;ಸೇರ್ಪಡೆಗೊಂಡ  ಬಿಜೆಪಿ ಮಾಜಿ ಶಾಸಕ ಅನಿಲ್ ಝಾ&nbsp;</p></div>

ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಮಾಜಿ ಶಾಸಕ ಅನಿಲ್ ಝಾ 

   

(ಪಿಟಿಐ ಚಿತ್ರ)

ನವದೆಹಲಿ: ಬಿಜೆಪಿ ಮುಖಂಡ ಹಾಗೂ ಕಿರಾರಿ ಕ್ಷೇತ್ರದ ಮಾಜಿ ಶಾಸಕ ಅನಿಲ್ ಝಾ ಅವರು ಪಕ್ಷ ತೊರೆದು ಭಾನುವಾರ ಎಎಪಿ ಸೇರಿದ್ದಾರೆ.

ADVERTISEMENT

ನಜಫ್‌ಗಢ ಶಾಸಕ ಹಾಗೂ ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹಲೋತ್ ಅವರು ಎಎಪಿ ತೊರೆದ ಕೆಲವೇ ತಾಸುಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ಅವರು ಝಾ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡರು. ಝಾ ಅವರು ಪೂರ್ವಾಂಚಲದ ದೊಡ್ಡ ನಾಯಕರ ಪೈಕಿ ಒಬ್ಬರು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಝಾ ಅವರು ಕಿರಾರಿ ಕ್ಷೇತ್ರದಲ್ಲಿ ಹಾಗೂ ದೆಹಲಿ ನಗರದಲ್ಲಿ ಎಎಪಿಗೆ ಬಲ ತಂದುಕೊಡಲಿದ್ದಾರೆ ಎಂದು ಕೂಡ ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಝಾ ಅವರಿಗೆ ಕಿರಾರಿ ಕ್ಷೇತ್ರದಿಂದ ಎಎಪಿ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.

ಕೇಜ್ರಿವಾಲ್ ಅವರ ವ್ಯಕ್ತಿತ್ವ ಹಾಗೂ ದೆಹಲಿಯಲ್ಲಿ ಪೂರ್ವಾಂಚಲದ ಜನರು ವಾಸಿಸುತ್ತಿರುವ ಕೆಲವು ಅನಧಿಕೃತ ಕಾಲೊನಿಗಳಲ್ಲಿ ಜೀವನಮಟ್ಟ ಸುಧಾರಿಸಲು ದೆಹಲಿಯ ಎಎಪಿ ನೇತೃತ್ವದ ಸರ್ಕಾರ ಕೈಗೊಂಡ ಕ್ರಮಗಳು ತಮ್ಮನ್ನು ಪ್ರಭಾವಿಸಿವೆ ಎಂದು ಝಾ ಹೇಳಿದ್ದಾರೆ.

ಎಎಪಿ ನೇತೃತ್ವದ ಸರ್ಕಾರವು ದೆಹಲಿಯಲ್ಲಿ 10 ಸಾವಿರ ಕಿ.ಮೀ. ಉದ್ದದ ರಸ್ತೆ ನಿರ್ಮಿಸಿದೆ, 6,800 ಕಿ.ಮೀ. ಉದ್ದದ ಒಳಚರಂಡಿ ವ್ಯವಸ್ಥೆ ನಿರ್ಮಿಸಿದೆ, 1,650 ಅನಧಿಕೃತ ಕಾಲೊನಿಗಳಿಗೆ ಕೊಳವೆ ಮೂಲಕ ನೀರಿನ ಸಂಪರ್ಕ ಕಲ್ಪಿಸಿದೆ. ಆದರೆ ಬಿಜೆಪಿಯು ಏನನ್ನೂ ಮಾಡಿಲ್ಲ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಗಹಲೋತ್ ಅವರ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಜ್ರಿವಾಲ್ ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.