ADVERTISEMENT

ಟಿಎಂಸಿ, ಸಿಪಿಐಎಂ, ಕಾಂಗ್ರೆಸ್‌ ಸೇರಲ್ಲ ಎಂಬ ಪೋಸ್ಟ್‌ ತಿದ್ದಿದ ಬಬೂಲ್‌!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 6:53 IST
Last Updated 1 ಆಗಸ್ಟ್ 2021, 6:53 IST
ಬಬೂಲ್‌ ಸುಪ್ರಿಯೋ
ಬಬೂಲ್‌ ಸುಪ್ರಿಯೋ    

ಕೋಲ್ಕತ್ತ: ‘ರಾಜಕೀಯ ತೊರೆಯುತ್ತಿದ್ದೇನೆ. ಟಿಎಂಸಿ, ಸಿಪಿಐ(ಎಂ) ಅಥವಾ ಕಾಂಗ್ರೆಸ್‌ ಸೇರುವುದಿಲ್ಲ,’ ಎಂದು ಹೇಳಿ ತಾವು ಪ್ರಕಟಿಸಿದ್ದ ಫೇಸ್‌ಬುಕ್‌ ಪೋಸ್‌ ಅನ್ನು ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಬಬೂಲ್‌ ಸುಪ್ರಿಯೋ ಮತ್ತೆ ತಿದ್ದಿದ್ದಾರೆ. ಇತರೆ ಪಕ್ಷಗಳಿಗೆ ಸೇರುವುದಿಲ್ಲ ಎಂಬ ಅಂಶವನ್ನು ಅವರು ತೆಗೆದು ಹಾಕಿದ್ದಾರೆ. ಈ ಮೂಲಕ ಬಬೂಲ್‌ ಅವರದ್ದು ಮುಂದೆ ಯಾವ ಪಕ್ಷ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆ ಮಾಡಿದೆ.

'ನನ್ನ ತಂದೆ, ಪತ್ನಿ, ಮಗಳು ಮತ್ತು ಕೆಲವು ಆಪ್ತ ಸ್ನೇಹಿತರ ಮಾತುಗಳನ್ನು ಆಲಿಸಿದೆ. ಎಲ್ಲವನ್ನೂ ಆಲಿಸಿದ ನಂತರ, ಬೇರೆ ಯಾವುದೇ ಪಕ್ಷಕ್ಕೆ ಸೇರುವ ನಿರ್ಧಾರವನ್ನು ನಾನು ತೆಗೆದುಕೊಂಡಿಲ್ಲ. ನಾನು ಕಾಂಗ್ರೆಸ್, ಟಿಎಂಸಿ ಅಥವಾ ಸಿಪಿಎಂ ಪಕ್ಷಗಳನ್ನು ಸೇರುತ್ತಿಲ್ಲ. ಅವರೂ ಸಹ ನನ್ನನ್ನು ಕರೆದಿಲ್ಲ ಎಂದು ಖಚಿತಪಡಿಸುತ್ತಿದ್ದೇನೆ' ಎಂದು ಅವರು ಶನಿವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದರು. ಈ ಮೂಲ ಪೋಸ್ಟ್‌ನಲ್ಲಿ ‘ಕಾಂಗ್ರೆಸ್, ಟಿಎಂಸಿ ಅಥವಾ ಸಿಪಿಎಂ ಪಕ್ಷಗಳನ್ನು ಸೇರುತ್ತಿಲ್ಲ’ ಎಂಬ ಅಂಶವನ್ನು ಅವರೀಗ ಡಿಲಿಟ್‌ ಮಾಡಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸಂಪುಟದಲ್ಲಿ 2014 ರಿಂದ ರಾಜ್ಯ ಖಾತೆ ಸಚಿವರಾಗಿ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದ್ದ ಬಬೂಲ್‌ರನ್ನು ಇತ್ತೀಚೆಗೆ ಸಂಪುಟದಿಂದ ಹೊರದಬ್ಬಲಾಗಿತ್ತು. ಕೇಂದ್ರ ಸಂಪುಟದಿಂದ ತಮ್ಮನ್ನು ಕೈಬಿಟ್ಟಿದ್ದು ಹಾಗೂ ಪಕ್ಷದ ರಾಜ್ಯ ಘಟಕದ ನಾಯಕರ ಜೊತೆಗಿನ ಭಿನ್ನಮತದಿಂದ ಅವರು ರಾಜಕೀಯ ನಿವೃತ್ತಿಯ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.