ADVERTISEMENT

ಟಿಕಾಯತ್‌ರ ಭಾರತ್ ಬಂದ್ ಕರೆಯನ್ನು ತಾಲಿಬಾನ್ ಚಟುವಟಿಕೆಗೆ ಹೋಲಿಸಿದ ಭಾನು ಪ್ರತಾಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2021, 8:48 IST
Last Updated 27 ಸೆಪ್ಟೆಂಬರ್ 2021, 8:48 IST
ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್   

ನವದೆಹಲಿ: ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಅವರು ‘ಭಾರತ್ ಬಂದ್’ಗೆ ಕರೆ ನೀಡಿರುವುದನ್ನು ‘ಬಿಕೆಯು–ಭಾನು’ ಘಟಕದ ಅಧ್ಯಕ್ಷ ಭಾನು ಪ್ರತಾಪ್ ಸಿಂಗ್ ತಾಲಿಬಾನ್ ಚಟುವಟಿಕೆಗಳಿಗೆ ಹೋಲಿಸಿದ್ದಾರೆ.

ಅವರು (ರಾಕೇಶ್ ಟಿಕಾಯತ್) ತಮ್ಮನ್ನು ರೈತ ನಾಯಕ ಎಂದು ಹೇಳಿಕೊಳ್ಳುತ್ತಾರೆ. ಆಮೇಲೆ, ಆರ್ಥಿಕತೆ ಹಾಗೂ ರೈತರ ಮೇಲೆ ಪರಿಣಾಮ ಬೀರುವ ಭಾರತ್ ಬಂದ್‌ಗೆ ಕರೆ ನೀಡುತ್ತಾರೆ. ಇದರಿಂದ ಯಾರಿಗೇ ಆದರೂ ಪ್ರಯೋಜನ ದೊರೆಯಲು ಹೇಗೆ ಸಾಧ್ಯ? ಈ ರೀತಿಯ ಚಟುವಟಿಕೆಗಳನ್ನು ಮಾಡುವ ಮೂಲಕ ಅವರು ತಾಲಿಬಾನ್‌ ನಡೆಯನ್ನು ಅನುಸರಿಸಲು ಬಯಸಿದ್ದಾರೆ... ಎಂದು ಭಾನು ಪ್ರತಾಪ್ ಸಿಂಗ್ ಹೇಳಿರುವುದಾಗಿ ‘ಎಎನ್‌ಐ’ ವರದಿ ಮಾಡಿದೆ.

ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬಿಕೆಯು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಇಂದು (ಸೆ.27) ಭಾರತ್ ಬಂದ್‌ಗೆ ಕರೆ ನೀಡಿದ್ದು, ದೇಶದಾದ್ಯಂತ ಕೇಂದ್ರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.