ADVERTISEMENT

ಸ್ಫೋಟ ಪ್ರಕರಣ: ಕೋರ್ಟ್‌ಗೆ ಪ್ರಜ್ಞಾ ಹಾಜರು

ಪಿಟಿಐ
Published 7 ಜೂನ್ 2019, 18:40 IST
Last Updated 7 ಜೂನ್ 2019, 18:40 IST
ನ್ಯಾಯಾಲಯಕ್ಕೆ ಹಾಜರಾದ ಪ್ರಜ್ಞಾ ಸಿಂಗ್ ಪಿಟಿಐ ಚಿತ್ರ
ನ್ಯಾಯಾಲಯಕ್ಕೆ ಹಾಜರಾದ ಪ್ರಜ್ಞಾ ಸಿಂಗ್ ಪಿಟಿಐ ಚಿತ್ರ   

ಮುಂಬೈ: ಮಾಲೆಗಾಂವ್‌ ಸ್ಫೋಟ ಪ್ರಕರಣ ಸಂಬಂಧ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್‌ ಶುಕ್ರವಾರ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವಾರ ಎರಡು ಬಾರಿ ಅವರು ಕೋರ್ಟ್‌ಗೆ ಗೈರು ಹಾಜರಾಗಿದ್ದರು.

‘ಸ್ಫೋಟ ಸಂಬಂಧ ಏನಾದರೂ ಹೇಳುವುದಿದೆಯೇ?’ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಧೀಶ ವಿ.ಎಸ್‌. ಪಾಡಲ್ಕರ್ ಅವರು ಪ್ರಜ್ಞಾ ಅವರಿಗೆ ಪ್ರಶ್ನಿಸಿದರು. ಅದಕ್ಕವರು ‘ಏನೂ ಗೊತ್ತಿಲ್ಲ’ ಎಂದು ಉತ್ತರಿಸಿದರು.

ಹನ್ನೊಂದು ವರ್ಷ ಹಳೆಯ ಸ್ಫೋಟ ಪ್ರಕರಣದ ವಿಚಾರಣೆಗೆ ಪ್ರಜ್ಞಾ ಅವರು ಶುಕ್ರವಾರ ಇಬ್ಬರು ಸಹಾಯಕರ ಸಹಾಯದಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇವರೊಂದಿಗೆ ಇತರೆ ಆರೋಪಿಗಳೂ ಬಂದಿದ್ದರು.

ADVERTISEMENT

ಆರೋಪಿಗಳಿಗೆ ಆದೇಶ ಓದಿ ಹೇಳಿದ ನ್ಯಾಯಾಧೀಶರು, ‘ವಾರದಲ್ಲಿ ಒಂದು ಬಾರಿಯಾದರೂ ನ್ಯಾಯಾಲಯಕ್ಕೆ ಹಾಜರಾಗಬೇಕು’ ಎಂದು ನಿರ್ದೇಶನ ನೀಡಿದರು.‘ನ್ಯಾಯಾಲಯ ಈವರೆಗೆ 116 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಇವರಲ್ಲಿ ವೈದ್ಯರು, ಪಂಚರು ಸೇರಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.