ನವದೆಹಲಿ: ಜಾರ್ಖಂಡ್‌ನ ಧನಬಾದ್‌ನಲ್ಲಿ ಶನಿವಾರ ಮುಂಜಾನೆ ರೈಲು ಹಳಿಯ ಒಂದು ಭಾಗದಲ್ಲಿ ಸ್ಫೋಟ ಸಂಭವಿಸಿದ್ದು, ಡೀಸೆಲ್ ಎಂಜಿನ್ ಹಳಿ ತಪ್ಪಿದೆ.
ಧನಬಾದ್‌ನ ಗರ್ವಾ ರಸ್ತೆ ಮತ್ತು ಬರ್ಕಾನಾ ನಡುವೆ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ರೈಲ್ವೆ ಹೇಳಿದೆ.
‘ದುಷ್ಕರ್ಮಿಗಳು ನಡೆಸಿದ ಬಾಂಬ್ ಸ್ಫೋಟದಿಂದಾಗಿ ಧನ್‌ಬಾದ್ ವಿಭಾಗದ ಡೀಸೆಲ್ ಲೊಕೊ ಹಳಿ ತಪ್ಪಿದೆ‘ ಎಂದು ರೈಲ್ವೆ ಇಲಾಖೆ ಹೇಳಿದೆ.
ಇದು ನಕ್ಸಲ್ ಸಂಬಂಧಿತ ಕೃತ್ಯ ಎಂದು ಮೂಲಗಳು ತಿಳಿಸಿವೆ. ಯಾವುದೇ ಸಾವು-ನೋವಿನ ವರದಿಯಾಗಿಲ್ಲ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಹಳಿ ಮರುಸ್ಥಾಪನೆಯ ಕೆಲಸವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.