ADVERTISEMENT

ಬಿಆರ್‌ಎಸ್ ತೊರೆದ ಹಾಲಿ ಸಂಸದ, ಶಾಸಕ: ಕಾಂಗ್ರೆಸ್ ಸೇರ್ಪಡೆ

ಪಿಟಿಐ
Published 17 ಮಾರ್ಚ್ 2024, 9:55 IST
Last Updated 17 ಮಾರ್ಚ್ 2024, 9:55 IST
<div class="paragraphs"><p>ತೆಲಂಗಾಣ ಕಾಂಗ್ರೆಸ್ ಎಕ್ಸ್ ಖಾತೆಯ ಚಿತ್ರ</p></div>
   

ತೆಲಂಗಾಣ ಕಾಂಗ್ರೆಸ್ ಎಕ್ಸ್ ಖಾತೆಯ ಚಿತ್ರ

ಹೈದರಾಬಾದ್: ಲೋಕಸಭಾ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್) ಪಕ್ಷಕ್ಕೆ ಆಘಾತ ನೀಡಿರುವ ಹಾಲಿ ಶಾಸಕ, ಸಂಸದ, ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದಾರೆ.

ಚೆವೆಳ್ಳ ಕ್ಷೇತ್ರದ ಸಂಸದ ರಂಜಿತ್ ರೆಡ್ಡಿ ಮತ್ತು ಖೈರತಾಬಾದ್‌ನ ಶಾಸಕ ಡಿ ನಾಗೇಂದ್ರ ಇಂದು ಪಕ್ಷ ತೊರೆದಿದ್ದಾರೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಮ್ಮುಖದಲ್ಲಿ ಅವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ADVERTISEMENT

ಬಿಆರ್‌ಎಸ್ ಪಕ್ಷಕ್ಕೆ ನಾನು ರಾಜೀನಾಮೆ ಸಲ್ಲಿಸಿದ್ದು, ನನ್ನ ಬೆಂಬಲಿಗರಿಗೆ ಈ ವಿಷಯ ತಿಳಿಸಲು ಬಯಸುತ್ತೇನೆ. ಚೆವೆಳ್ಳ ಕ್ಷೇತ್ರದಲ್ಲಿ ಜನರ ಸೇವೆ ಮಾಡಲು ನನಗೆ ಅರ್ಥಪೂರ್ಣ ಅವಕಾಶ ಕೊಟ್ಟ ಬಿಆರ್‌ಎಸ್ ಪಕ್ಷಕ್ಕೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಬದಲಾದ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಅವರು ಎಕ್ಸ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇವತ್ತು ಇತರೆ ಪಕ್ಷಗಳ ನಾಯಕರಿಗೆ ನಾವು ಬಾಗಿಲು ತೆರೆದಿದ್ದೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ರೇವಂತ್ ರೆಡ್ಡಿ ಹೇಳಿದ್ದಾರೆ.

ವಾರಂಗಲ್ ಕ್ಷೇತ್ರದ ಸಂಸದ ಪಸುನೂರಿ ದಯಾಕರ್ ಶನಿವಾರ ಕಾಂಗ್ರೆಸ್ ಸೇರಿದ್ದರು.

ಈ ಹಿಂದೆ ಬಿಆರ್‌ಎಸ್ ಪಕ್ಷದ ಜಹೀರಾಬಾದ್ ಮತ್ತು ನಾಗರ್ ಕರ್ನೂಲ್‌ನ ಸಂಸದರಾದ ಬಿ.ವಿ. ಪಾಟೀಲ್ ಮತ್ತು ಬಿ. ರಾಮುಲು ಬಿಜೆಪಿ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.