ವಡೋದರ, ಗುಜರಾತ್ (ಪಿಟಿಐ): ನಗರ ಹೊರವಲಯದ ಕೆರೆಯೊಂದರಲ್ಲಿ ಗುರುವಾರ ದೋಣಿ ಮಗುಚಿಕೊಂಡಿದ್ದು, ಪ್ರವಾಸ ತೆರಳಿದ್ದ 14 ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ.
ಶಾಲೆಯೊಂದರ 24 ವಿದ್ಯಾರ್ಥಿಗಳು, ನಾಲ್ವರು ಶಿಕ್ಷಕರು ಪ್ರವಾಸ ತೆರಳಿದ್ದರು. ಹೊರವಲಯದ ಹರ್ನಿ ಕೆರೆಯಲ್ಲಿ ಅವಘಡ ಸಂಭವಿಸಿದೆ.
ನಾಪತ್ತೆಯಾಗಿರುವ ಇತರರಿಗೆ ಶೋಧ ಕಾರ್ಯ ನಡೆದಿದೆ. ಸದ್ಯ, 14 ಮಕ್ಕಳು ಮತ್ತು ಇಬ್ಬರು ಶಿಕ್ಷಕರ ಶವ ಪತ್ತೆಯಾಗಿದೆ. ಒಬ್ಬ ವಿದ್ಯಾರ್ಥಿಯನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೆರೆಯಲ್ಲಿ ದೋಣಿ ಮಗುಚಿ ಪಿಕ್ನಿಕ್‌ಗೆ ಹೊರಟಿದ್ದ 14 ಮಕ್ಕಳು, ಇಬ್ಬರು ಶಿಕ್ಷಕರು ಸಾವಿಗೀಡಾಗಿರುವ ದುರ್ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ಮಕ್ಕಳೆಲ್ಲ ಹತ್ತು ವರ್ಷದವರಾಗಿದ್ದಾರೆ. ಘಟನೆಗೆ ಕಾರಣ ತಿಳಿದುಬಂದಿಲ್ಲ. ದೋಣಿಯಲ್ಲಿ ತೆರಳಿದ್ದವರಲ್ಲಿ ಯಾರೂ ಜೀವರಕ್ಷಕ ಕವಚ ಧರಿಸಿರಲಿಲ್ಲ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.