ADVERTISEMENT

ಚಂಡಮಾರುತ: ದೋಣಿ ಮುಳುಗಿ ಮೂವರು ನಾಪತ್ತೆ

ಪಿಟಿಐ
Published 1 ಮೇ 2019, 18:25 IST
Last Updated 1 ಮೇ 2019, 18:25 IST
ಮೀನುಗಾರಿಕೆ ಸ್ಥಗಿತಗೊಳಿಸಿದ್ದರಿಂದ ವಿಶಾಖಪಟ್ಟಣ ಬಳಿಯ ಬೀಚ್‌ನಲ್ಲಿ ಬುಧವಾರ ದೋಣಿಗಳನ್ನು ನಿಲ್ಲಿಸಲಾಗಿತ್ತು –ರಾಯಿಟರ್ಸ್‌ ಚಿತ್ರ
ಮೀನುಗಾರಿಕೆ ಸ್ಥಗಿತಗೊಳಿಸಿದ್ದರಿಂದ ವಿಶಾಖಪಟ್ಟಣ ಬಳಿಯ ಬೀಚ್‌ನಲ್ಲಿ ಬುಧವಾರ ದೋಣಿಗಳನ್ನು ನಿಲ್ಲಿಸಲಾಗಿತ್ತು –ರಾಯಿಟರ್ಸ್‌ ಚಿತ್ರ   

ವಿಶಾಖಪಟ್ಟಣಂ: ಚಂಡಮಾರುತಕ್ಕೆ ಸಿಲುಕಿ ದೋಣಿ ಮಗುಚಿದ ಪರಿಣಾಮ ಇಂಫಾಲ್‌ನ ಮೂವರು ಮೀನುಗಾರರು ನಾಪತ್ತೆಯಾಗಿದ್ದು, ಭಾರತೀಯ ನೌಕಾಪಡೆಯ ಮುಳುಗು ತಜ್ಞರ ತಂಡ ಶೋಧ ಕಾರ್ಯದಲ್ಲಿ ತೊಡಗಿದೆ.

ಕಾಮ್‌ಜೊಂಗ್‌ ಜಿಲ್ಲೆಯ ಮಾಪಿಥಾಲ್‌ ಜಲಾಶಯದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ದೋಣಿಯು ಏಪ್ರಿಲ್ 28ರಂದು ಬೀಸಿದ ಚಂಡಮಾರುತಕ್ಕೆ ಸಿಲುಕಿ ಮುಳುಗಿತ್ತು.

ಮಣಿಪುರ ಸರ್ಕಾರದ ಮನವಿ ಮೇರೆಗೆ 12 ಮುಳುಗು ತಜ್ಞರು ಹಾಗೂ ಇಬ್ಬರು ಜಲತಜ್ಞರು ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ನೌಕಾಪಡೆಯು ಪ್ರಕಟಣೆಯಲ್ಲಿ ತಿಳಿಸಿದೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು ಈಗಾಗಲೇ ಶೋಧ ಕಾರ್ಯ ನಡೆಸುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.