ಹಾಥರಸ್(ಉತ್ತರ ಪ್ರದೇಶ):ಕಾಲ್ತುಳಿತದಲ್ಲಿ ಮೃತಪಟ್ಟಿರುವವರ ಗುರುತು ಪತ್ತೆ ಮಾಡಲಾಗಿದ್ದು, ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಕುಮಾರ್ ಗುರುವಾರ ಹೇಳಿದ್ದಾರೆ.
ಹಾಥರಸ್ ಜಿಲ್ಲೆಯ ಪೋಲರಾಯ್ ಗ್ರಾಮದಲ್ಲಿ ಮಂಗಳವಾರ(ಜುಲೈ 2) ಆಯೋಜಿಸಿದ್ದ ಸತ್ಸಂಗದ ವೇಳೆ ಸಂಭವಿಸಿದ ಕಾಲ್ತುಳಿತದಿಂದಾಗಿ 121 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಸತ್ತವರಲ್ಲಿ ಹೆಚ್ಚಿನವರು ಮಹಿಳೆಯರಾಗಿದ್ದರು.
‘ಮೂರು ಮೃತದೇಹಗಳನ್ನು ಗುರುತಿಸುವುದು ಬುಧವಾರದವರೆಗೆ ಬಾಕಿ ಇತ್ತು. ಬುಧವಾರ ತಡರಾತ್ರಿ ಎರಡು ಮೃತದೇಹಗಳ ಗುರುತು ಪತ್ತೆ ಮಾಡಲಾದರೆ, ಗುರುವಾರ ಬೆಳಿಗ್ಗೆ ವಿಡಿಯೊ ಕರೆ ಮೂಲಕ ಮತ್ತೊಂದು ಶವದ ಗುರುತು ಪತ್ತೆ ಮಾಡಲಾಯಿತು’ ಎಂದರು.
‘ಉತ್ತರ ಪ್ರದೇಶ ಸರ್ಕಾರ ಮೃತರ ಕುಟುಂಬಕ್ಕೆ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಪರಿಹಾರ ಘೋಷಿಸಿದೆ’ ಎಂದು ಇದೇ ವೇಳೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.